ಮೈಸೂರು : ರಂಗಾಯಣ ಮೈಸೂರು ಇದರ ಭಾರತೀಯ ರಂಗಶಿಕ್ಷಣ ಕೇಂದ್ರದ 2025-26ನೇ ಸಾಲಿನ ವಿದ್ಯಾರ್ಥಿಗಳ ಅಭ್ಯಾಸ ಮಾಲಿಕೆ ಪ್ರದರ್ಶನವನ್ನು ದಿನಾಂಕ 14 ಸೆಪ್ಟೆಂಬರ್ 2025ರಂದು ಸಂಜೆ 6-30 ಗಂಟೆಗೆ ಮೈಸೂರು ರಂಗಾಯಣದ ಭೂಮಿಗೀತ ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ. ಕುಮಾರವ್ಯಾಸ ಭಾರತದ ರಂಗ ವಾಚಿಕ ಪ್ರಯೋಗ ‘ಹಡೆದ ಕೊಡಲಿಗಳು’ ನಾಟಕ ಕೆ.ಜಿ. ಮಹಾಬಲೇಶ್ವರ ಇವರ ರಂಗ ಪಠ್ಯ ಮತ್ತು ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.