ಚೇಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಚೇಳೂರು ತಾಲೂಕು, ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ ರಾಜ್ಯ ಇವರು ಚೇಳೂರು ತಾಲೂಕು ಕೇಂದ್ರದಲ್ಲಿ ದಸರ ಹಬ್ಬದ ಪ್ರಯುಕ್ತ ಭಾರತೀಯ ಭಾಷೆಗಳ ಕವಿ ಮಿತ್ರರಿಗೆ “ದಸರ ಕವಿಗೋಷ್ಠಿ”ಯನ್ನು ಆಯೋಜಿಸುತಿದ್ದು, ಭಾಗವಹಿಸಲು ಇಚ್ಚಿಸುವ ಕವಿಗಳು ಈ ಕೆಳಗೆ ನೀಡಿರುವ ಜಂಗಮ ವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ರಾಧಾಮಣಿ ಎಂ. ಕೋಲಾರ – 9972731056, ಸತ್ಯ ನಾರಾಯಣ ವಿ. – 9945291154, ಪಿ. ಎಸ್. ಶ್ರೀಧರ್(ಶಾಸ್ತ್ರಿ) – 9606794039
ನಿಯಮಗಳು:-
1)ಕವನ ಭಾರತೀಯ ಭಾಷೆಗಳಲ್ಲಿ ಯಾವುದೇ ಭಾಷೆಯದ್ದಾಗಿರಬಹುದು,
2)ಒಬ್ಬರು ಒಂದು ಕವನ ಮಾತ್ರ ವಾಚನ ಮಾಡಲು ಅವಕಾಶ ನೀಡಲಾಗುವುದು,
3)ದೇಶ ಭಕ್ತಿ, ನಾಡು ನುಡಿಗೆ ಸಂಬಂಧಪಟ್ಟಿರಬೇಕು,
4)ಚುಟುಕು, ಹನಿಗವನ, ಟಂಕಾ, ಹಾಯ್ಕುಗಳಿಗೆ ಅವಕಾಶವಿರುವುದಿಲ್ಲ,
5)ದಸರ ಹಬ್ಬದ ಕವನಗಳಿಗೆ ಆದ್ಯತೆ ನೀಡಲಾಗುವುದು,
6)ಕವನದಲ್ಲಿ 16 ರಿಂದ 20 ಸಾಲುಗಳು ಇರಲಿ,
7)ಕವನಗಳು ಸ್ವರಚಿತವಾಗಿರಬೇಕು,
8)ಕವಿಗಳು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಬೇಕು,
9)ಭಾಗವಹಿಸಿದ ಎಲ್ಲಾ ಕವಿಗಳಿಗೂ ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಲಾಗುವುದು,
10)ಸಂಸ್ಥೆಯ ಕಾರ್ಯಕಾರಿ ಸಮಿತಿಯ ತೀರ್ಮಾನಗಳಿಗೆ ಬದ್ಧರಾಗಿರಬೇಕು.,
11) ಗೋಷ್ಠಿಯ ದಿನಾಂಕ 27 ಸೆಪ್ಟೆಂಬರ್ 2025 ನಾಲ್ಕನೇ ಶನಿವಾರ.
12)ಮುಂಚಿತವಾಗಿ ದೂರದಿಂದ ಬಂದವರಿಗೆ ಉಳಿಯಲು ವ್ಯವಸ್ಥೆ ಮಾಡಲಾಗುವುದು .
Subscribe to Updates
Get the latest creative news from FooBar about art, design and business.
Previous Articleಅದ್ದೂರಿಯಾಗಿ ರಂಗಪ್ರವೇಶಗೈದ ಕುಮಾರಿ ಅಪೂರ್ವ ಬಿ. ರಾವ್
Next Article ಉದ್ಘಾಟನೆಗೊಂಡ ಯಕ್ಷಧ್ರುವ ಪಟ್ಲ ಫೌಂಡೇಶನ್ ಹೈದರಬಾದ್ ಘಟಕ