ಹೈದರಬಾದ್ : ಹೈದರಾಬಾದಿನಲ್ಲಿ ಸ್ಥಳೀಯ ಶಾಸಕರಾದ ಕಾಲೇರು ವೆಂಕಟೇಶ್ ಹಾಗೂ ಡಿಸಿಪಿ ರಾಹುಲ್ ಹೆಗ್ಡೆಯವರ ಉಪಸ್ಥಿತಿಯಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ ಇದರ 44ನೇ ಘಟಕದ ಉದ್ಘಾಟನಾ ಸಮಾರಂಭವು ದಿನಾಂಕ 10 ಸೆಪ್ಟೆಂಬರ್ 2025ರ ಬುಧವಾರದಂದು ನಡೆಯಿತು.
ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅರ್ಚಕರು, ಸುಪ್ರಭಾತ ಗ್ರೂಪ್ಸ್ ಆಫ್ ಹೋಟೆಲ್ ಹೈದರಾಬಾದಿನ ಮಾಲೀಕರಾದ ಕೃಷ್ಣಮೂರ್ತಿ ಮಂಜ ಅವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರೆ ಶ್ರೀ ಎನ್. ಶ್ರೀಧರ್ ರಾವ್ ಗೌರವಾಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಟಿ. ಸತ್ಯನಾರಾಯಣ ಹತ್ತಾವರ ಮತ್ತು ಏ. ಜಯರಾಮ ಶೆಟ್ಟಿ, ಕಾರ್ಯದರ್ಶಿಯಾಗಿ ಜಿ. ರತ್ನಾಕರ್ ರೈ, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಸುಮತಿ ನಿರಂಜನ್ ರಾವ್ ಮತ್ತು ಕೋಶಾಧಿಕಾರಿಯಾಗಿ ಎನ್. ಕೆ. ರಮಾ ಮೂರ್ತಿಯವರು ಹಾಗೂ 18 ಮಂದಿ ಸದಸ್ಯರು ತಮ್ಮ ಸ್ಥಾನವನ್ನು ಅಲಂಕರಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣಮೂರ್ತಿ ಮಂಜ ಅವರು ಕಳೆದ ಯಕ್ಷದ್ರುವ ದಶಮ ಸಂಭ್ರಮಕ್ಕೆ ಹೈದರಾಬಾದಿನಿಂದ ಘೋಷಿಸಿದ ಹತ್ತು ಲಕ್ಷದ ಮೊತ್ತವನ್ನು ಸಹೃದಯಿ ದಾನಿಗಳ ಮೂಲಕ ಪಟ್ಲ ಸತೀಶ್ ಶೆಟ್ಟಿ ಅವರಿಗೆ ಹಸ್ತಾಂತರ ಮಾಡಿದರು.
ಪಟ್ಲ ಸತೀಶ್ ಶೆಟ್ಟಿ ಅವರು ನೂತನ ಘಟಕದ ಸರ್ವ ಪದಾಧಿಕಾರಿಗಳಿಗೆ, ದಾನಿಗಳಿಗೆ ಹಾಗೂ ಸಮಸ್ತ ಕನ್ನಡಿಗರಿಗೆ ಅಭಿನಂದನೆಗಳನ್ನು ಅರ್ಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮೆಕ್ಕೆಕಟ್ಟು ನoದಿಕೇಶ್ವರ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಿತು.
Subscribe to Updates
Get the latest creative news from FooBar about art, design and business.
Previous Articleಚೇಳೂರಿನಲ್ಲಿ “ದಸರ ಕವಿಗೋಷ್ಠಿ” | ಸೆಪ್ಟೆಂಬರ್ 27