ಬಂಟ್ವಾಳ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ (ರಿ.) ಇದರ ಮೂವತ್ತೆರಡನೆಯ ವಾರ್ಷಿಕೋತ್ಸವ, ನೂತನ ಗ್ರಂಥ ಅನಾವರಣ, ಪ್ರಶಸ್ತಿ ಪ್ರದಾನ ಹಾಗೂ ಸಂಸ್ಕ್ರತ ಪ್ರತಿಭಾ ಪುರಸ್ಕಾರ ಸಮಾರಂಭದ ಅಂಗವಾಗಿ ದಿನಾಂಕ 14 ಸೆಪ್ಟೆಂಬರ್ 2025ರಂದು ತಾಳಮದ್ದಳೆ ಕಾರ್ಯಕ್ರಮವು ವಿದ್ಯಾ ಕುಟೀರ, ಬೈಪದವು ಕಬಕ ಇಲ್ಲಿ ‘ಭೀಷ್ಮಾರ್ಜುನ’ (ಕರ್ಮಬಂಧ) ಎಂಬ ಆಖ್ಯಾನದೊಂದಿಗೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಾಯ ಸಂಪಾಜೆ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್ ಹಾಗೂ ಪಿ.ಟಿ. ಜಯರಾಮ ಭಟ್ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ (ಭೀಷ್ಮ) ಕಿಶೋರಿ ದುಗ್ಗಪ್ಪ ನಡುಗಲ್ಲು (ಶ್ರೀ ಕೃಷ್ಣ), ಶುಭಾ ಗಣೇಶ್ (ಅಭಿಮನ್ಯು), ಹರಿಣಾಕ್ಷಿ ಜೆ. ಶೆಟ್ಟಿ(ಅರ್ಜುನ) ಸಹಕರಿಸಿದರು. ಸಂಪ್ರತಿಷ್ಠಾನದ ಅಧ್ಯಕ್ಷ ರಮೇಶ್ ಭಟ್, ನಾರಾಯಣ ಭಟ್ ಹಾಗೂ ತಿರುಮಲೇಶ್ವರ ಭಟ್ ಕಲಾವಿದರಿಗೆ ಶಾಲು ಹಾಗೂ ಪುಸ್ತಕ ನೀಡಿ ಗೌರವಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು.