ಬೆಂಗಳೂರು : ವಿಜಯನಗರ ಬಿಂಬ (ರಿ.) ಇದರ ರಂಗ ಶಿಕ್ಷಣ ಕೇಂದ್ರ ಚೊಟಾಣಿ ವಿಭಾಗದ ವತಿಯಿಂದ ‘ಚೊಟಾಣಿ ನಾಟಕೋತ್ಸವ’ವನ್ನು ದಿನಾಂಕ 19 ಮತ್ತು 20 ಸೆಪ್ಟೆಂಬರ್ 2025ರಂದು ಪ್ರತಿ ದಿನ ಸಂಜೆ 6-00 ಗಂಟೆಗೆ ವಿಜಯನಗರ ಬಿಂಬದ ಸರಳಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. 3ರಿಂದ 8 ವರ್ಷದ ಪುಟಾಣಿಗಳಿಂದ 2 ಹೊಸ ಚೊಟಾಣಿ ನಾಟಕಗಳ ಪ್ರದರ್ಶನ ನೀಡಲಿದ್ದಾರೆ.
ದಿನಾಂಕ 19 ಸೆಪ್ಟೆಂಬರ್ 2025ರಂದು ಡಾ. ಬೃಂದ ಇವರ ರಚನೆ ಮತ್ತು ನಿರ್ದೇಶನದಲ್ಲಿ ‘ಕಾನನಕೀಯ’ ಮತ್ತು ದಿನಾಂಕ 20 ಸೆಪ್ಟೆಂಬರ್ 2025ರಂದು ಡಾ. ಸುಷ್ಮಾ ಎಸ್.ವಿ. ಇವರ ರಚನೆ ಮತ್ತು ನಿರ್ದೇಶನದಲ್ಲಿ ‘ಅರಿ ಜಂಭ ಮುರಿ’ ನಾಟಕಗಳು ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ 9845265967, 9844152967, 9845734967, 9880033018 ಮತ್ತು 9844017881 ಸಂಖ್ಯೆಯನ್ನು ಸಂಪರ್ಕಿಸಿರಿ.