ಮೂಡುಬಿದಿರೆ : ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ.) ಬೆಂಗಳೂರು ಇದರ ವತಿಯಿಂದ ‘ವಿಶ್ವ ಬನ್ನಂಜೆ 90ರ ನಮನ’ ಸಮಾರಂಭವನ್ನು ದಿನಾಂಕ 20 ಸೆಪ್ಟಂಬರ್ 2024ರಂದು ಸಂಜೆ 5-00 ಗಂಟೆಗೆ ಮೂಡುಬಿದಿರೆ ಅಲಂಗಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಿದ್ವಾಂಸರಾದ ವಿಜಯಸಿಂಹ ಆಚಾರ್ಯರು ಉಪನ್ಯಾಸ ನೀಡಲಿದ್ದು, ಬನ್ನಂಜೆ ಯವರ ಜೊತೆ ಮೂಡುಬಿದಿರೆಯ ಅನುಬಂಧದ ಬಗ್ಗೆ ಬಾಲಕೃಷ್ಣ ಭಟ್ ಮಾತನಾಡಲಿದ್ದಾರೆ. ಶ್ರೀಮತಿ ಕವಿತಾ ಉಡುಪ ಮತ್ತು ಶ್ರೀಮತಿ ಸುಮಾ ಶಾಸ್ತ್ರಿ ಇವರಿಂದ ಬನ್ನಂಜೆಯವರ ಹಾಡುಗಬ್ಬ ಹಾಗೂ ದೇವೀದಾಸ ವಿರಚಿತ ‘ಜೀವ ಭಾವ’ ಪ್ರಸಂಗದ ಯಕ್ಷಗಾನ ತಾಳಮದ್ದಲೆ ನಡೆಯಲಿದೆ. ಹಿಮ್ಮೇಳದಲ್ಲಿ ರವಿಚಂದ್ರ ಕನ್ನಡಿಕಟ್ಟೆ, ಚೈತನ್ಯಕೃಷ್ಣ ಪದ್ಯಾಣ ಮತ್ತು ಶ್ರೀಧರ ವಿಟ್ಲ ಹಾಗೂ ಮುಮ್ಮೇಳದಲ್ಲಿ ವಿದ್ಯಾವಾಚಸ್ಪತಿ ಶ್ರೀ ಕೆರೆಕೈ ಉಮಾಕಾಂತ ಭಟ್ಟ, ಸುಣ್ಣಂಬಳ ವಿಶ್ವೇಶ್ವರ ಭಟ್ಟ ಮತ್ತು ವಾಸುದೇವ ರಂಗಭಟ್ಟ ಮಧೂರು ಇವರುಗಳು ಸಹಕರಿಸಲಿದ್ದಾರೆ.