ಬೆಂಗಳೂರು : ತೆಂಕು ಬಡಗಿನ ಅತಿಥಿ ದಿಗ್ಗಜರ ಸಮಾಗಮದಲ್ಲಿ ನಾಗರಾಜ್ ಶೆಟ್ಟಿ ನೈಕಂಬ್ಳಿ ಸಂಯೋಜನೆಯ ‘ಯಕ್ಷ ಸಂಕ್ರಾಂತಿ’ ಭಾವ ಬಣ್ಣಗಳ ಒಡ್ಡೋಲಗ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 20 ಸೆಪ್ಟೆಂಬರ್ 2025ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಹೊಸ್ತೋಟ ಮಂಜುನಾಥ ಭಾಗವತರು ವಿರಚಿತ ‘ರಾಮ ನಿರ್ಯಾಣ’ ಮತ್ತು ‘ಕಾಲಯವನ’, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ವಿರಚಿತ ‘ಗಿರಿ ಪೂಜೆ’, ದೇವಿ ದಾಸ ವಿರಚಿತ ‘ಚಿತ್ರಸೇನ’ ಪ್ರಸಂಗದ ಯಕ್ಷಗಾನ ಪ್ರದರ್ಶನದಲ್ಲಿ ಹಿಮ್ಮೇಳದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್ಯ, ರಾಮಕೃಷ್ಣ ಹೆಗಡೆ ಹಿಲ್ಲೂರು, ಚಂದ್ರಕಾಂತ್ ರಾವ್ ಮೂಡುಬೆಳ್ಳೆ, ಪ್ರಸಾದ್ ಕುಮಾರ್ ಮೊಗೆಬೆಟ್ಟು, ಮಧುಕರ ಹೆಗ್ಡೆ ಮಡಾಮಕ್ಕಿ ಶ್ರೀನಿವಾಸ ಪ್ರಭು, ಅಕ್ಷಯ್ ಆಚಾರ್ಯ, ಶಶಾಂಕ ಆಚಾರ್ಯ ಮತ್ತು ಪ್ರಜ್ವಲ್ ಮುಂಡಾಡಿ ಹಾಗೂ ಮುಮ್ಮೇಳದಲ್ಲಿ ರಾಮಚಂದ್ರ ಹೆಗಡೆ ಕೊಂಡದಕುಳಿ, ಕೃಷ್ಣಯಾಜಿ ಬಳ್ಕೂರು, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಸುಧೀರ್ ಉಪ್ಪೂರು, ಶಂಕರ ಹೆಗಡೆ ನೀಲ್ಕೋಡು, ವಿಶ್ವನಾಥ ಹೆನ್ನಾಬೈಲ್, ಪ್ರಜ್ವಲ್ ಕುಮಾರ್, ದಿನೇಶ್ ಕನ್ನಾರ್, ಭಾಸ್ಕರ ಮರಾಠೆ, ಕೆ.ಜೆ. ಕಾರ್ತಿಕ, ವಿದ್ಯಾಧರ್ ರಾವ್ ಜಲವಳ್ಳಿ, ಜಬ್ಬಾರ್ ಸಮೋ, ಉದಯ ಹೆಗಡೆ ಕಡಬಾಳ್, ಕಾರ್ತಿಕ್ ಕಣ್ಣಿಮನೆ, ಸುನಿಲ್ ಹೊಲಾಡು, ರವೀಂದ್ರ ದೇವಾಡಿಗ, ನರಸಿಂಹ ಚಿಟ್ಟಾಣಿ, ವಿಶ್ವನಾಥ ಆಚಾರ್ಯ ತೊಂಬಟ್ಟು, ಅಣ್ಣಪ್ಪ ಮಾಗೋಡು, ನಂದೀಶ್ ಜನ್ನಾಡಿ, ಪುರಂದರ ಮೂಡ್ಕಣಿ, ಸಂತೋಷ ಹೆಂಗವಳ್ಳಿ, ಪುರುಷೋತ್ತಮ ಸಾಗರ, ಆತ್ರೇಯ ಗಾಂವ್ಕರ್ ಇವರುಗಳು ಸಹಕರಿಸಲಿದ್ದಾರೆ.