ಉಡುಪಿ : ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿಗೆ ಕ.ಸಾ.ಪ. ವತಿಯಿಂದ ಪುಸ್ತಕಗಳ ಕೊಡುಗೆಯನ್ನು ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರವಿರಾಜ್ ಹೆಚ್.ಪಿ. ಇವರು ಕಾಲೇಜು ಪ್ರಾಂಶುಪಾಲ ಜಗದೀಶ ಕುಮಾರ್ ಇವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕ.ಸಾ.ಪ. ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು, ರಂಜನಿ ವಸಂತ್, ಸಂಘಟನಾ ಕಾರ್ಯದರ್ಶಿ ಸತೀಶ್ ಕೊಡವೂರು, ದೀಪಾ ಕರ್ಕಿ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಭವ್ಯಾ ನಾಗರಾಜ, ಎನ್.ಎಸ್.ಎಸ್. ನಾಯಕಿ, ಮೇಘಾ ಹಾಗೂ ಉಪನ್ಯಾಸಕಿ ಸುಧಾ ಆಡುಕಳ ಉಪಸ್ಥಿತರಿದ್ದರು.