ಮಂಗಳೂರು : ವಿಶ್ವಮಿತ್ರರು ಕೈಕಂಬ ಇದರ 27ನೇ ವರ್ಷದ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವನ್ನು ದಿನಾಂಕ 21 ಸೆಪ್ಟೆಂಬರ್ 2025ರಂದು ಮಧ್ಯಾಹ್ನ 1-30 ಗಂಟೆಗೆ ಕೈಕಂಬ ಕಿನ್ನಿಕಂಬಳ ಶ್ರೀ ರಾಧಾಕೃಷ್ಣ ಭಜನಾ ಮಂದಿರದಲ್ಲಿ ಆಯೋಜಿಸಲಾಗಿದೆ.
ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಅಂಬಾ ಶಪಥ’ ಮತ್ತು ಮೂಲಿಕೆ ರಾಮಕೃಷ್ಣಯ್ಯ ವಿರಚಿತ ‘ಸುಧನ್ವಾರ್ಜುನ’ ಪ್ರಸಂಗದ ಹಿಮ್ಮೇಳದಲ್ಲಿ ಭಾಗವತರಾಗಿ ದಿವಾಕರ ಆಚಾರ್ಯ ಪೊಳಲಿ ಮತ್ತು ರವಿಚಂದ್ರ ಕನ್ನಡಿಕಟ್ಟೆ, ಚೆಂಡೆ ಮದ್ದಲೆಯಲ್ಲಿ ದಯಾನಂದ ಶೆಟ್ಟಿಗಾರ್ ಮಿಜಾರು, ಶ್ರೀಧರ ಪಡ್ರೆ, ಸೂರಜ್ ಆಚಾರ್ಯ ಮೂಲ್ಕಿ ಸುಮೀತ್ ಕಿನ್ನಿಕಂಬಳ ಹಾಗೂ ಮುಮ್ಮೇಳದಲ್ಲಿ ಶಂಭುಶರ್ಮ ವಿಟ್ಲ, ಸುಣ್ಣಂಬಳ ವಿಶ್ವೇಶ್ವರ ಭಟ್, ಉಜಿರೆ ಅಶೋಕ ಭಟ್, ವಾಸುದೇವ ರಂಗಾಭಟ್ ಮಧೂರು, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಸಂಕದಗುಂಡಿ ಗಣಪತಿ ಭಟ್, ಡಾ. ಪ್ರದೀಪ್ ಸಾಮಗ, ನವೀನ್ ಆಚಾರ್ಯ ಅಡ್ಡೂರು ಸಹಕರಿಸಲಿದ್ದಾರೆ.