ಉಳ್ಳಾಲ : ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ತಿನ ವತಿಯಿಂದ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿಯು ಮತ್ತು ಭಾವೈಕ್ಯತಾ ಸಾಹಿತ್ಯ ರತ್ನ ಮತ್ತು ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 14 ಸೆಪ್ಟೆಂಬರ್ 2025ರಂದು ದೇರಳಕಟ್ಟೆಯ ಅಲ್ ಸಲಾಮ ಸಭಾಂಗಣದಲ್ಲಿ ನಡೆಯಿತು.
ಹಿರಿಯ ಕವಿಗಳಾದ ಪತ್ರಕರ್ತ ಜಯಾನಂದ ಪೆರಾಜೆ, ಶಿಕ್ಷಕಿ ಡಾ. ಶಾಂತ ಪುತ್ತೂರು, ವೈದ್ಯ ಡಾ. ಸುರೇಶ ನೆಗಳಗುಳಿ, ಹಾ.ಮ. ಸತೀಶ, ವಿರಾಜ್ ಅಡೂರು, ಮಲ್ಲಿಕಾ ಜೆ. ರೈ, ಪ್ಲಾವಿಯ ಅಲ್ಬುಕರ್ಕ್, ಬಶೀರ್ ಅಹ್ಮದ್ ಬಂಟ್ವಾಳ, ಸಹನಾ ಕಾಂತಬೈಲು, ರತ್ನಾ ಕೆ. ತಲಂಜೇರಿ ಇವರಿಗೆ ‘ಭಾವೈಕ್ಯತಾ ಸಾಹಿತ್ಯ ರತ್ನ ಪ್ರಶಸ್ತಿ’ ಮತ್ತು ಸಮಾಜ ಸೇವಕರಾದ ಡಾ. ರವಿ ಕಕ್ಯಪದವು, ಡಾ. ಹರ್ಷ ಕುಮಾರ್ ರೈ, ಕೆ.ಟಿ ರಾಜೇಂದ್ರ ಹೊಳ್ಳ ಕಲ್ಲಡ್ಕ, ಅಬ್ದುಲ್ ರಹಿಮಾನ್ ಸಂಕೇಶ್ ಇವರಿಗೆ ‘ಸಮಾಜ ಸೇವಾ ರತ್ನ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಡಾ. ಯು.ಟಿ. ಇಫ್ತಿಖಾರ್ ಅಲಿಯವರಿಗೆ ‘ಶಿಕ್ಷಣ ರತ್ನ ಪ್ರಶಸ್ತಿ’, ಭಾವೈಕ್ಯತಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಭೀಮ ರಾವ್ ವಾಷ್ಠರ್ ಇವರನ್ನು ಸನ್ಮಾನಿಸಲಾಯಿತು. ವಸಂತ ಜೋಗಿ ಕುಂದಾಪುರ ಉದ್ಘಾಟಿಸಿ, ನಾರಾಯಣ ರೈ ಕುಕ್ಕುವಳ್ಳಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಸೌಹಾರ್ದತೆ ಮತ್ತು ಮಾದಕತೆಯ ವಿರುದ್ಧ ಕವಿಗಳು ಚುಟುಕು ಕವನ ವಾಚಿಸಿದರು. ಅಬೂಬಕ್ಕರ್ ಅನಿಲಕಟ್ಟೆ ಸ್ವಾಗತಿಸಿ, ಕೆ.ಎ. ಅಬ್ದುಲ್ ಅಝೀಜ್ ಪುಣಚ ವಂದಿಸಿ, ಸಂಘಟಕ ಇಕ್ಬಾಲ್ ಬಾಳಿಲ ನಿರೂಪಿಸಿದರು.