ನಂದಳಿಕೆ : ವಿಶಾಲ ಯಕ್ಷ ಕಲಾ ಬಳಗ ನಂದಳಿಕೆ ಕಾರ್ಕಳ ತಾಲೂಕು ಇದರ ವತಿಯಿಂದ ಹಮ್ಮಿಕೊಂಡ ‘ತಾಳಮದ್ದಳೆ ಜ್ಞಾನಯಜ್ಞ’ ಶತಕೋತ್ತರ ಕಾರ್ಯಕ್ರಮವನ್ನು ದಿನಾಂಕ 21, 23, 26 ಸೆಪ್ಟೆಂಬರ್ ಮತ್ತು 02 ಅಕ್ಟೋಬರ್ 2025ರಂದು ಆಯೋಜಿಸಲಾಗಿದೆ.
ದಿನಾಂಕ 21 ಸೆಪ್ಟೆಂಬರ್ 2025ರಂದು ಬೆಳಿಗ್ಗೆ 9-30 ಗಂಟೆಗೆ ಮೂಡುಬಿದಿರೆ ಪ್ರೀತಮ್ ಗಾರ್ಡನ್ ಇಲ್ಲಿ ‘ಶ್ರೀ ಕೃಷ್ಣ ಸಂಧಾನ’, ದಿನಾಂಕ 23 ಸೆಪ್ಟೆಂಬರ್ 2025ರಂದು ಸಂಜೆ 6-00 ಗಂಟೆಗೆ ನಿಟ್ಟೆ ಕೆಮ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ‘ಸುಧಾಮ ಚರಿತ್ರೆ’, ದಿನಾಂಕ 26 ಸೆಪ್ಟೆಂಬರ್ 2025ರಂದು ಮಧ್ಯಾಹ್ನ 2-30 ಗಂಟೆಗೆ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ‘ರಾವಣಾಂತರಂಗ’ ಮತ್ತು ದಿನಾಂಕ 02 ಅಕ್ಟೋಬರ್ 2025ರಂದು ಬೆಳಿಗ್ಗೆ 10-00 ಗಂಟೆಗೆ ವಾಮದಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ‘ಕರ್ಣ ಪರ್ವ’ ಪ್ರಸಂಗದ ತಾಳಮದ್ದಳೆ ನಡೆಯಲಿದೆ.