ಬೆಂಗಳೂರು : ಡಾ. ವೇಮಗಲ್ ನಾರಾಯಣಸ್ವಾಮಿ ಸಾಂಸ್ಕೃತಿಕ ಮತ್ತು ಸೇವಾ ಪ್ರತಿಷ್ಠಾನ (ರಿ.) ಇದರ ವತಿಯಿಂದ ನಾಟಕ ಪ್ರದರ್ಶನವನ್ನು ದಿನಾಂಕ 23 ಸೆಪ್ಟೆಂಬರ್ 2025ರಂದು ಸಂಜೆ 3-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿರಿಯ ರಂಗಕರ್ಮಿ ಸಿ. ಬಸವಲಿಂಗಯ್ಯ ಇವರು ಚಾಲನೆ ನೀಡಲಿದ್ದು, ದ್ರಾವಿಡ ವಿಶ್ವವಿದ್ಯಾಲಯದ ಡೀನ್ ಎಂ.ಎನ್. ವೆಂಕಟೇಶ್ ಇವರಿಂದ ಪ್ರಾಸ್ತಾವಿಕ ನುಡಿ ಹಾಗೂ ಕರ್ಣಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪ್ರೊ. ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಗುಂಡೇಲು ರವೀಂದ್ರ, ವಿನಾಯಕ ನಾಟಕ ಮಂಡಳಿ, ಬೈರೆಡ್ಡಿ ಪಲ್ಲಿ, ಟಿ.ಎನ್. ಕುಪ್ಪಂ, ಚಿತ್ತೂರು ಜಿಲ್ಲೆ ಆಂಧ್ರಪ್ರದೇಶ ತಂಡದಿಂದ ‘ನಲ್ಲತಂಗ’ ಮತ್ತು ‘ಸಾಸುವೆ ಚಿನ್ನಮ್ಮ’ ಎಂಬ ಎರಡು ನಾಟಕಗಳ ಪ್ರದರ್ಶನ ನಡೆಯಲಿದೆ.