ಚನ್ನಗಿರಿ : ರಂಗ ಮಿಡಿತ (ರಿ.) ಗೊಪ್ಪೇನಹಳ್ಳಿ ಮತ್ತು ಚಂದಗಿರಿ ನರ್ಸರಿ ಶಾಲೆ ಚನ್ನಗಿರಿ ಆಯೋಜಿಸುತ್ತಿರುವ ‘ಗೊಂಬೆಗಳ ಜೊತೆಯಲಿ’ ಮಕ್ಕಳ ಕಲೆ, ಕಲ್ಪನೆ ಮತ್ತು ಕ್ರಿಯೆಗೊಂದು ಉತ್ಸವವನ್ನು ದಿನಾಂಕ 26 ಸೆಪ್ಟೆಂಬರ್ 2025ರಂದು ಮಧ್ಯಾಹ್ನ 1-30 ಗಂಟೆಗೆ ಚನ್ನಗಿರಿಯ ಚಂದಗಿರಿ ನರ್ಸರಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಅರುಣ ಬಿ.ಟಿ. ಗೊಪ್ಪೇನಹಳ್ಳಿಯವರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮಕ್ಕಳ ಕಥೆ ಹಾಡುಗಳ ಗೊಂಬೆಯಾಟ, ಸೂತ್ರದ ಗೊಂಬೆ, ಕಡ್ಡಿ ಗೊಂಬೆ, ಬೆರಳು ಗೊಂಬೆ, ನೆರಳು ಗೊಂಬೆ ಇವುಗಳ ರೋಚಕ ಪರಿಚಯ, ಪೋಷಕರೊಂದಿಗೆ ಗೊಂಬೆ ತಯಾರಿ, ಮಕ್ಕಳಿಗೆ ಗೊಂಬೆಯಾಟ ಅನುಭವ. ಹೆಸರು ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ 9481986116 ಮತ್ತು 9448895493 ಸಂಖ್ಯೆಯನ್ನು ಸಂಪರ್ಕಿಸಿರಿ.