ಸುಳ್ಯ : ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ವ್ಯಕ್ತಿತ್ವ ವಿಕಸನ ತರಬೇತುದಾರರೂ ಆದ ಲೇಖಕಿ, ಕವಯತ್ರಿ ಡಾ. ಅನುರಾಧಾ ಕುರುಂಜಿಯವರು 2025ರ ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಆಯ್ಕೆಯಾಗಿರುತ್ತಾರೆ.
ದಿನಾಂಕ 25 ಸೆಪ್ಟೆಂಬರ್ 2025ರಂದು ಮಡಿಕೇರಿಯ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆಯಲಿರುವ ಬಹುಭಾಷಾ ಕವಿಗೋಷ್ಠಿಯಲ್ಲಿ ಇವರು ಕವನ ವಾಚಿಸಲಿದ್ದು, ಈ ಹಿಂದೆ ಹಂಪಿ ಉತ್ಸವ ಹಾಗೂ ತಾಲೂಕು, ಜಿಲ್ಲೆ, ರಾಜ್ಯ, ಕೇರಳ ರಾಜ್ಯ, ಕಾಸರಗೋಡು ಮೊದಲಾದ ಕಡೆಗಳಲ್ಲಿ ಕವನ, ಚುಟುಕು ವಾಚನಗಳನ್ನು ಮಾಡಿದುದಲ್ಲದೇ ಮಂಗಳೂರು, ಮಡಿಕೇರಿ ಆಕಾಶವಾಣಿಗಳಲ್ಲೂ ಕವನ ವಾಚಿಸಿದ್ದರು.
ಈಗಾಗಲೇ ಇವರ “ಮೌನವನು ಮುರಿದಾಗ” ಎಂಬ ಕವನ ಸಂಕಲನ ಲೋಕರ್ಪಣೆಗೊಂಡಿದ್ದು, “ಜೀವನ ಪಯಣ” ಕವನ ಸಂಕಲನ ಪ್ರಕಟಣಾ ಹಂತದಲ್ಲಿದೆ. ಇವರು ಪದ್ಮಯ್ಯ ಗೌಡ ಕುರುಂಜಿ ಮತ್ತು ಸೀತಮ್ಮ ಕುರುಂಜಿ ದಂಪತಿಗಳ ಪುತ್ರಿ ಪುತ್ರಿಯಾಗಿದ್ದು , ಕೆ. ವಿ. ಜಿ. ಪಾಲಿಟೆಕ್ನಿಕ್ ಇಲ್ಲಿನ ಶಿಕ್ಷಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಚಂದ್ರಶೇಖರ ಬಿಳಿನೆಲೆಯವರ ಪತ್ನಿ.
Subscribe to Updates
Get the latest creative news from FooBar about art, design and business.
Previous Articleತುಳುಭವನದಲ್ಲಿ ಬಹುಭಾಷಾ ಕವಿಗೋಷ್ಠಿ