ಸಾಗರ : ಅಭಿವ್ಯಕ್ತಿ ಬಳಗ (ರಿ.) ತುಮರಿ ಸಾಗರ ಇವರ ವತಿಯಿಂದ ‘ಹಾ. ಮ. ಭಟ್ಟ ನೆನಪಿನ ಹಬ್ಬ’ ಮೂರು ದಿನಗಳ ಕಾಲ ಆತ್ಮೀಯ ಒಡನಾಟ ಮತ್ತು ಸಂವಾದ ಕಾರ್ಯಕ್ರಮವನ್ನು ದಿನಾಂಕ 27, 28 ಮತ್ತು 29 ಸೆಪ್ಟೆಂಬರ್ 2025ರಂದು ಹಮ್ಮಿಕೊಳ್ಳಲಾಗಿದೆ.
ಕೂಟದಲ್ಲಿ ಮನುಷ್ಯ ಪ್ರಜ್ಞೆಯ ನೆಲದ ದನಿಗಳಾದ ಡಾ. ಯು.ಆರ್. ಅನಂತಮೂರ್ತಿ, ಪಿ. ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ತ್ರಿವೇಣಿ, ಎಂ.ಕೆ. ಇಂದಿರಾ ಇವರ ನೆನಪಿನ ಹೆಗ್ಗುರುತುಗಳ ಸುತ್ತಮುತ್ತ ಒಂದು ಆತ್ಮೀಯ ಪಯಣ. ಹಾಡು, ಕವಿತೆ, ಹರಟೆ, ಸಂಗೀತ, ನಾಟಕ, ಸಾಂಸ್ಕೃತಿಕ ರಂಜನೆಯೂ ಇರಲಿದೆ.