ಮೈಸೂರು : ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಸುರಭಿ (ರಿ.) ಬೈಂದೂರು ಇದರ ವತಿಯಿಂದ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವದಲ್ಲಿ ಪ್ರಪ್ರಥಮ ಬಾರಿಗೆ ಬೈಂದೂರಿನ ಸುರಭಿಯ ಹಿರಿಯ ಹಾಗೂ ಕಿರಿಯ ಕಲಾವಿದರ ಕೂಡುವಿಕೆಯಿಂದ ‘ಯಕ್ಷಗಾನ ವೈಭವ’ ಕಾರ್ಯಕ್ರಮವನ್ನು ದಿನಾಂಕ 24 ಸೆಪ್ಟೆಂಬರ್ 2025ರಂದು ಸಂಜೆ 7-30 ಗಂಟೆಗೆ ಮೈಸೂರಿನ ಶ್ರೀ ರಮಾ ಗೋವಿಂದ ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ. ಶ್ರೀ ಪ್ರಶಾಂತ ಮಯ್ಯ ದಾರಿಮಕ್ಕಿ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಸುಧನ್ವಾರ್ಜುನ’ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.