ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ). ಸಿದ್ಧನಹಳ್ಳಿ ಇದರ ವತಿಯಿಂದ ಅನಿಕೇತನ ಕನ್ನಡ ಬಳಗ ಬೆಂಗಳೂರು ಇವರ ಸಹಯೋಗದೊಂದಿಗೆ ಆಯೋಜಿಸಿರುವ ಗಾಂಧಿ ವಿವೇಕಾನಂದ ಪ್ರಣಿತಾ ರಾಜ್ಯ ಮಟ್ಟದ 10ನೇ ಯುವಜನ ಸಾಹಿತ್ಯ ಸಂಸ್ಕೃತಿ ಸಮ್ಮೇಳನವನ್ನು ದಿನಾಂಕ 28 ಸೆಪ್ಟೆಂಬರ್ 2025ರಂದು ಬೆಳಗ್ಗೆ 9-15 ಗಂಟೆಗೆ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಕವಿಗಳು, ಕೃಷಿಕರು, ಕನ್ನಡ ಉಪನ್ಯಾಸಕರು ಆಗಿರುವ ಡಾ. ಎಂ.ಆರ್.ಉಪೇಂದ್ರ ಕುಮಾರ್ ಇವರ ಸರ್ವಾಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಶಿಕ್ಷಣ ತಜ್ಞ, ಗಾಂಧಿ ಭವನದ ಅಧ್ಯಕ್ಷರಾದ ಡಾ. ವೂಡೇ ಪಿ. ಕೃಷ್ಣ ಉದ್ಘಾಟಿಸಲಿದ್ದು, ಪ್ರಸಿದ್ಧ ವಿದ್ವಾಂಸರಾದ ಡಾ. ವಿಜಯಾ ಸುಬ್ಬರಾಜ್ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಗಾಂಧೀಜಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗ್ರಾಮೀಣ ಶಾಲಾ ಶಿಕ್ಷಕರ ಸಂಘದ ಎಂ.ಆರ್. ಮಲ್ಲಿಕಾರ್ಜುನಯ್ಯ, ವಕೀಲರಾದ ನಂಜಪ್ಪ ಕಾಳೇಗೌಡ್ರು, ಹಿರಿಯ ಸಾಹಿತಿಗಳಾದ ಸುರೇಶ್ ಕೋರಕೊಪ್ಪ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಬಿಎಂಶ್ರೀ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಶಾಂತರಾಜು, ಪತ್ರಕರ್ತ ಪರಿಸರ ಮಂಜುನಾಥ್, ಶಿಕ್ಷಕಿ ಜಿ.ಬಿ. ಮಾಲಾ, ಕ್ರೀಡಾಭಿಮಾನಿ ಸುಗುಮಾರನ್ ದೇವರಾಜ್, ಸಾಮಾಜಿಕ ಹೋರಾಟಗಾರ ಕೆ.ಜಿ. ಕುಮಾರ್, ಸಾಹಿತಿ ಗುಂಡೀಗೆರೆ ವಿಶ್ವನಾಥ್ ಹಾಗೆಯೇ ಸಮಾರೋಪ ಸಮಾರಂಭದಲ್ಲಿ ಅನಿಕೇತನ ಪ್ರಶಸ್ತಿಗೆ ಖ್ಯಾತ ನೃತ್ಯಪಟು ಡಾ. ಶುಭಾರಾಣಿ ಬೋಲಾರ್, ಪ್ರಗತಿಪರ ಕೃಷಿಕ ಎಂ.ಸಿ. ರಾಜು, ಯುವ ವೈದ್ಯ ಡಾ. ಪ್ರಜ್ವಲ್ ಜಿ. ಗೌಡ, ಕನ್ನಡ ಚಳುವಳಿಯ ಸು. ಜಗದೀಶ್ ಇವರಿಗೆ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಪ್ರದಾನ ಮಾಡುವರು.
ಕೃಷಿ ತಜ್ಞ, ಸಾಹಿತಿ ಡಾ. ಶರತ್ಚಂದ್ರ ಜಿ. ರಾನಡೆ ಅವರು ಬಿ. ಶೃಂಗೇಶ್ವರ, ಸಿದ್ಧರಾಮ ಕಲ್ಮಠ, ರಾಮಕೃಷ್ಣಯ್ಯ ನೊಣವಿನಕೆರೆ, ಡಾ. ಎಸ್. ಪಾರಿಜಾತ, ಡಾ. ಸಂಗಮೇಶ ಎಸ್. ಗಣಿ, ಲೋಕೇಶ್ ಮನ್ವಿತ್ ಇವರ ಕೃತಿಗಳಿಗೆ ಬಿಎಂಶ್ರೀ ಪುಸ್ತಕ ಪ್ರಶಸ್ತಿ ಪ್ರದಾನ ಮಾಡುವರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅನಿಕೇತನ ಕನ್ನಡ ಬಳಗದ ಅಧ್ಯಕ್ಷರಾದ ಮಾಯಣ್ಣ ವಹಿಸಲಿದ್ದಾರೆ. ಕನ್ನಡದ ಕಣ್ವ ಬಿ.ಎಂ.ಶ್ರೀ ಪ್ರಶಸ್ತಿಯನ್ನು ಸಮಾವೇಶದ ಅಧ್ಯಕ್ಷರಾದ ಡಾ. ಉಪೇಂದ್ರಕುಮಾರ್ ಇವರಿಗೆ ನೀಡಲಾಗುತ್ತದೆ. ಕುಂಚ ಕಲಾವಿದೆ ಶಾಂತಿ ವಾಸು ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಚಾಲನೆ, ಅಂಬುಜಾ ಪ್ರಕಾಶ್ ಇವರಿಂದ ಪುಸ್ತಕ ಮಳಿಗೆ ಉದ್ಘಾಟನೆ, ಬಿ.ಆರ್. ನಾಗೇಶ್ ಇವರಿಂದ ಧ್ವಜಾರೋಹಣ ನೆರವೇರಲಿದೆ. ಸಂಸ್ಥೆಯ ಅಧ್ಯಕ್ಷ ಡಾ. ರಾಮಲಿಂಗೇಶ್ವರ ಪ್ರಾಸ್ತಾವಿಕ ಭಾಷಣ ಮಾಡುವರು, ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಕವಯಿತ್ರಿ ಪುಷ್ಪ ಬಣಕಾರ್, ಲೇಖಕ ಡಾ. ಆರ್. ವಾದಿರಾಜ್, ಕವಿ ಕೃಷ್ಣ ಹಾನ್ ಬಾಳ್, ನಾಗರಾಜ್ ನಾದಲೀಲೆ, ಡಾ. ವೆ. ಅಜಿತ್ ಕುಮಾರ್, ಟಿ. ವೀರಭದ್ರಪ್ಪ, ನಗೆಮಳೆರಾಜ ಚಂದ್ರಾಜು, ಕನ್ನಡಭಕ್ತ ಕಿರಣ್ ಇವರಿಂದ ವಿವಿಧ ವಿಷಯ ವಿಚಾರ ಕುರಿತು ಮಾತನಾಡುವರು. ಗೀತಗಾಯನ, ಸಮೂಹ ನೃತ್ಯ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿವೆ.