ಬೆಂಗಳೂರು : ಕನ್ನಡದ ಖ್ಯಾತ ಕಾದಂಬರಿಕಾರ, ಚಿಂತಕ, ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ (94) ಇವರು ವಯೋ ಸಹಜ ಖಾಯಿಲೆಯಿಂದ ಬೆಂಗಳೂರಿನಲ್ಲಿ ದಿನಾಂಕ 24 ಸೆಪ್ಟೆಂಬರ್ 2025ರಂದು ನಿಧನ ಹೊಂದಿದ್ದಾರೆ.
1934ರ ಜುಲೈ 26ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರ ಗ್ರಾಮದಲ್ಲಿ ಜನಿಸಿದರು. ಎಸ್.ಎಲ್. ಭೈರಪ್ಪರವರು ಕನ್ನಡದ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಮತ್ತು ಅಮರವಾದುದು. ಇವರ ಪ್ರಮುಖ ಕೃತಿಗಳು : ‘ವಂಶವೃಕ್ಷ’, ‘ದಾಟು’, ‘ತಂತು’, ‘ಅಂಚು’, ‘ಪರ್ವ’, ‘ಗೃಹಭಂಗ’, ‘ಸಾರ್ಥ’, ‘ಮಂದ್ರ’ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ಎಸ್ ಎಲ್ ಭೈರಪ್ಪ ಅವರ ಕಾದಂಬರಿಗಳು: ‘ಧರ್ಮಶ್ರೀ’, ‘ದೂರ ಸರಿದರು’, ‘ಮತದಾನ’, ‘ವಂಶವೃಕ್ಷ’, ‘ಜಲಪಾತ’, ‘ನಾಯಿ ನೆರಳು’, ‘ತಬ್ಬಲಿಯು ನೀನಾದೆ ಮಗನೆ’, ‘ಗೃಹಭಂಗ’ ಸೇರಿದಂತೆ ಹಲವಾರು ಕಾದಂಬರಿಗಳು ಪ್ರಖ್ಯಾತಿಯನ್ನು ಹೊಂದಿದೆ.
ಎಸ್.ಎಲ್. ಭೈರಪ್ಪರವರಿಗೆ ಸಂದ ಪ್ರಶಸ್ತಿಗಳು : ಭಾರತ ಸರ್ಕಾರದಿಂದ ನೀಡಲಾದ ದೊಡ್ಡ ಗೌರವ ‘ಪದ್ಮ ಭೂಷಣ’-2023, ಕೇಂದ್ರ ಸರಕಾರದ ‘ಪದ್ಮಶ್ರೀ’- 2016, ಮಮೋನಿ ರೈಸೊಂ ಗೋಸ್ವಾಮಿ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ‘ಅಸ್ಸಾಂ ಸಾಹಿತ್ಯ ಸಭಾ’ -2016, ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್- 2015, ಸಾಹಿತ್ಯ ಅಕಾಡೆಮಿ ಫೆಲೋಶಿಪ್-2015, ಡಾ. ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ-2014, ವಾಗ್ವಿಲಾಸಿನಿ ಪುರಸ್ಕಾರ್ : ದೀನನಾಥ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ -2012, ನಾಡೋಜ ಪ್ರಶಸ್ತಿ-2011, ಸರಸ್ವತಿ ಸಮ್ಮಾನ್ ಪ್ರಶಸ್ತಿ ‘ಮಂದ್ರ’ ಕಾದಂಬರಿಗೆ -2010, ಎನ್.ಟಿ.ಆರ್. ರಾಷ್ಟ್ರೀಯ ಪ್ರಶಸ್ತಿ-2007, ಗುಲಬರ್ಗಾ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ -2007, ಪಂಪ ಪ್ರಶಸ್ತಿ -2005, ಎಸ್.ಆರ್. ಪ್ರಶಸ್ತಿ-2002, ಸಾಮಾನ್ಯ ಜ್ಞಾನ ಪ್ರಶಸ್ತಿ -2002, ಗೊರೂರು ಪ್ರಶಸ್ತಿ -2000, ಗ್ರಂಥಲೋಕ, ವರ್ಷದ ಅತ್ಯುತ್ತಮ ಸಾಹಿತ್ಯ ಕೃತಿ ‘ಸಾಕ್ಷಿ’ -1998, ಭಾರತೀಯ ಭಾಷಾ ಪರಿಷತ್ ಸಂವತ್ಸರ ಪುರಸ್ಕಾರ್, ಕೊಲ್ಕತ್ತಾ ‘ತಂತು’ ಕಾದಂಬರಿ : 1998, ಮಾಸ್ತಿ ಸಾಹಿತ್ಯ ಪ್ರಶಸ್ತಿ -1996, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ -1995, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ : ‘ದಾಟು’ ಕಾದಂಬರಿಗೆ -1975, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ‘ವಂಶವೃಕ್ಷ’ ಕಾದಂಬರಿಗೆ -1966, ರಾಷ್ಟ್ರೀಯ ಪ್ರಾಧ್ಯಾಪಕ ‘ನ್ಯಾಷನಲ್ ಪ್ರೊ-ಸರ್’ ಗೌರವ ಸಾಹಿತ್ಯ ಅಕಾಡೆಮಿ ಫೆಲೋ ಗೌರವ.