ಉಳ್ಳಾಲ : ಸಾರ್ವಜನಿಕ ನವರಾತ್ರಿ ಶ್ರೀ ಶಾರದಾ ಉತ್ಸವ ಸಮಿತಿ ಉಳ್ಳಾಲ ಇದರ ಆಶ್ರಯದಲ್ಲಿ ದಿನಾಂಕ 30 ಸೆಪ್ಟೆಂಬರ್ 2025ರ ಮಂಗಳವಾರ ಮಧ್ಯಾಹ್ನ ಘಂಟೆ 2-30 ಕ್ಕೆ “ರಸಪ್ರಶ್ನೆ” ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಉಳ್ಳಾಲದ ಶಾರದಾ ನಿಕೇತನದಲ್ಲಿ ಜರುಗಲಿರುವ ಈ ಸ್ಪರ್ಧೆಯಲ್ಲಿ ಸಾರ್ವಜನಿಕರೆಲ್ಲರಿಗೂ ಮುಕ್ತವಾಗಿ ಸ್ಪರ್ಧಿಸಲು ಅವಕಾಶವಿದ್ದು, ಇಬ್ಬರು ತಂಡವಾಗಿ ಭಾಗವಹಿಸಬೇಕಾಗುತ್ತದೆ. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನದೊಂದಿಗೆ ನಗದು ಪುರಸ್ಕಾರ ನೀಡಲಾಗುವುದು. ಪ್ರೊ. ಗಿಲ್ ರಾಜ್, ಆಸ್ಟ್ರೇಲಿಯಾ ಅವರ ಆಯೋಜಕತ್ವದಲ್ಲಿ ನಡೆಯಲಿರುವ ಈ ಸ್ಪರ್ಧೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೆಂಕಟಗಿರಿ ಬೇಕಲ್ – 9845083765 ಅಥವಾ ದಿನೇಶ್ ಉಳ್ಳಾಲ – 9341109898 ಇವರನ್ನು ಸಂಪರ್ಕಿಸಬಹುದೆಂದು ಉತ್ಸವ ಸಮಿತಿಯ ಅಧ್ಯಕ್ಷ ಭರತ್ ಕುಮಾರ್ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.