ಉದ್ಯಾವರ : ಶ್ರೀ ಗಣೇಶ ಕಲಾಮಂದಿರ (ರಿ.) ಉದ್ಯಾವರ, ಸಾರ್ವಜನಿಕ ಶ್ರೀ ಶಾರದೋತ್ಸವದ ಸಮಿತಿ ಉದ್ಯಾವರ ಆಶ್ರಯದಲ್ಲಿ ರಾಜ್ಯದ ಹೆಸರಾಂತ ಹವ್ಯಾಸಿ ನಾಟಕ ಸಂಸ್ಥೆಯಾದ ‘ರಂಗಭೂಮಿ (ರಿ.) ಉಡುಪಿ’ ಇವರು ಪ್ರಸ್ತುತ ಪಡಿಸುವ ‘ಕಾಲಚಕ್ರ’ ನಾಟಕ ಪ್ರದರ್ಶನವನ್ನು ದಿನಾಂಕ 30 ಸೆಪ್ಟೆಂಬರ್ 2025ರಂದು ರಾತ್ರಿ 9-00 ಗಂಟೆಗೆ ಉದ್ಯಾವರ ಶಾರದೋತ್ಸವದ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರದೀಪ್ ಚಂದ್ರ ಕುತ್ಪಾಡಿ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಶ್ರೀಪಾದ ಹೆಗಡೆ ಇವರ ಸಹ ನಿರ್ದೇಶನದಲ್ಲಿ ಪ್ರಸ್ತುತ ಗೊಳ್ಳುವ ಈ ನಾಟಕಕ್ಕೆ ಗೀತೆ ರಚನೆ ಮತ್ತು ಸಂಗೀತ ನಿರ್ದೇಶನ ಗೀತಂ ಗಿರೀಶ್, ಬೆಳಕು ನಿತಿನ್ ಪೆರಂಪಳ್ಳಿ ನೀಡಿರುತ್ತಾರೆ.
‘ಕಾಲಚಕ್ರ’ ನಮ್ಮ ನಿಮ್ಮ ಮಧ್ಯೆ ಇರುವ ಹಿರಿಜೀವಗಳು-ಕಿರಿಜೀವಗಳೇ ಈ ನಾಟಕದ ಪಾತ್ರ. ಮನೆ ಮನದ ಕಥೆ ಇಲ್ಲಿನ ವಸ್ತು. ಕಾಲಾಂತರದಲ್ಲಿ ತಲೆಮಾರುಗಳ ಮಧ್ಯೆ ಬೆಸೆಯುವ ಮೌಲ್ಯಗಳು, ಬದುಕಿನ ವಿವಿಧ ಸ್ತರದಲ್ಲಿ ಕಾಣುವ ಅನಿವಾರ್ಯತೆ, ಮರುಕಳಿಸುವ ನೆನಪುಗಳು, ನಂಬುಗೆ – ನಡವಳಿಕೆಯ ತಾಕಲಾಟ, ಪ್ರತಿಯೊಬ್ಬರಿಗೂ ನಿಚ್ಚಳವಾಗಿ ಬಂದೇ ಬರುವ ಪ್ರೀತಿಯ ಸೆಲೆಯ ಅತ್ಮೀಯ ಬಂಧ… ಹೀಗೆ ನಾಟಕದ ಅಲೆಗಳು ಸಹೃದಯರ ಅಂತರ್ಯದಲ್ಲಿ ಭಾವಾಂತರಂಗವನ್ನೇ ಸೃಷ್ಟಿಸಿ, ಮಾನವೀಯ ಮೌಲ್ಯಗಳೆಡೆಗೆ ನಮ್ಮ ದೃಷ್ಟಿಕೋನವನ್ನು ವಿಸ್ತಾರಗೊಳಿಸೀತು.