ಮಂಗಳೂರು : ಶ್ರೀದೇವಿ ನೃತ್ಯ ಕೇಂದ್ರ ಇದರ ಸುವರ್ಣ ಮಹೋತ್ಸವದ ಪ್ರಯುಕ್ತ ಹೊಸ ಶಾಖೆಯು ದಿನಾಂಕ 01 ಅಕ್ಟೋಬರ್ 2025ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ಉರ್ವಸ್ಟೋರ್ ಕೋಟೆಕಣಿ ರೋಡಿನಲ್ಲಿರುವ ವೀಕೇ ಪಾರ್ಕ್ ಅಪಾರ್ಟ್ಮೆಂಟಿನಲ್ಲಿ ಉದ್ಘಾಟನೆಗೊಳ್ಳಲಿದೆ.
ಶಾಂತಲಾ ಪ್ರಶಸ್ತಿ ಪುರಸ್ಕೃತ ಜಯಲಕ್ಷ್ಮಿ ಆಳ್ವ ಇವರ ಶಿಷ್ಯೆ ವಿದುಷಿ ಸಾತ್ವಿಕಾ ರೈ ಇವರಿಂದ ನೃತ್ಯ ತರಬೇತಿ ನೀಡಲಿದ್ದು, ಅದೇ ದಿನ ಭರತನಾಟ್ಯ ತರಗತಿಯು ಪ್ರಾರಂಭಗೊಳ್ಳಲಿದೆ. ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗೆ 9740540679 ಸಂಖ್ಯೆಯನ್ನು ಸಂಪರ್ಕಿಸಿರಿ.