ಮಂಗಳೂರು : ಮೇರಿಹಿಲ್ ಗುರುನಗರದ ನೃತ್ಯ ಸುಧಾ ಕೇಂದ್ರದ ವಾರ್ಷಿಕೋತ್ಸವದ ಅಂಗವಾಗಿ ‘ನೃತ್ಯೋತ್ಕರ್ಷ -2023’ ಭರತನಾಟ್ಯ ಕಾರ್ಯಕ್ರಮ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ನಡೆಯಿತು.
ಶ್ರೀಮತಿ ಚಂದ್ರಮತಿ ಅಗಳಿ, ಶ್ರೀ ಎಸ್.ಪಿ. ರಮೇಶ್ ರಾವ್ ಹಾಗೂ ಇವರ ಜೊತೆ ವಿದ್ವಾನ್ ಕೃಷ್ಣಾಚಾರ್ ಇವರುಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕೃಷ್ಣ ರಾವ್ ಅಗಳಿ ನೆರವೇರಿಸಿದರು. ನೃತ್ಯ ಸುಧಾ ಕೇಂದ್ರ ಹುಟ್ಟಿ ಬೆಳೆದು ಬಂದ ದಾರಿಯ ಅವಲೋಕನ ಮಾಡಿ ಈಗ ಅಭಿವೃದ್ಧಿ ಪಥದಲ್ಲಿ ಮುಂದುವರಿಯುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಏಪ್ರಿಲ್ 21ರಂದು ಮಗಳು ವಿದುಷಿ ಸೌಮ್ಯಾ ಅವರ ಹುಟ್ಟುಹಬ್ಬ. ಈ ಹುಟ್ಟುಹಬ್ಬವನ್ನು ಆಡಂಬರ, ದುಂದುವೆಚ್ಚವಿಲ್ಲದೆ ಸಂಭ್ರಮಿಸುವುದು ಸೌಮ್ಯಾ ಅವರ ಉದ್ದೇಶವಾಗಿತ್ತು. ಸಂಸ್ಥೆಯ ವಿದ್ಯಾರ್ಥಿಗಳಲ್ಲಿ ವಿದ್ವತ್ ಮುಗಿಸಿದವರಿಗೆ, ಏಕವ್ಯಕ್ತಿ ನೃತ್ಯ ಪ್ರದರ್ಶನ, ಕಿರಿಯರ ವಿಭಾಗ, ಹಿರಿಯರ ವಿಭಾಗ ಮತ್ತು ವಿದ್ವತ್ ಪೂರ್ವ ವಿದ್ಯಾರ್ಥಿಗಳಿಗೆ ಸಮೂಹ ನೃತ್ಯಗಳನ್ನು ಮಾಡುವ ವ್ಯವಸ್ಥೆ ಮಾಡಿದ್ದು, ಒಟ್ಟು 28 ಮಂದಿ ಇದರಲ್ಲಿ ಭಾಗವಹಿಸುವವರಿದ್ದರು. ಅದಕ್ಕೆ ಬೇಕಾಗುವ ಖರ್ಚನ್ನು ಸಂಸ್ಥೆಯ ವತಿಯಿಂದ ಭರಿಸುವ ವ್ಯವಸ್ಥೆಯನ್ನು ಮಾಡುವ ಮೂಲಕ ವೇದಿಕೆ ಕಲ್ಪಿಸಿಕೊಟ್ಟು ಜನ್ಮದಿನದ ಸಂಭ್ರಮವನ್ನು ಹಂಚಿಕೊಂಡ ರೀತಿಗೆ ತಂದೆ ಕೃಷ್ಣ ರಾವ್ ಅಗಳಿಯವರು ಸಂತೋಷ ವ್ಯಕ್ತಪಡಿಸಿದರು.
ಬಹಳ ವರ್ಷಗಳಿಂದ ಪ್ರಸ್ತುತ ಸಂಸ್ಥೆಯ ಹುಟ್ಟು, ಅಭಿವೃದ್ಧಿಯನ್ನು ಗಮನಿಸುತ್ತಾ ಬಂದಿದ್ದ ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಶ್ರೀ ಯೋಗೀಶ್ ಶೆಟ್ಟಿ ಜಪ್ಪು ಇವರು ಮಾತನಾಡಿ “ಕಲೆಯಲ್ಲಿ ತೊಡಗಿಸಿಕೊಂಡ ಮಕ್ಕಳು ಮನಸ್ಸಿನೊಳಗೆ ಕ್ರಿಯಶೀಲರಾಗಿರುತ್ತಾರೆ. ಸಂಸ್ಕಾರ, ಸಂಸ್ಕೃತಿಯ ಮೇಲೆ ಪ್ರೀತಿ ಉಂಟಾಗುತ್ತದೆ. ಅಂತಹಾ ಸಂಸ್ಕಾರ ಈ ಸಂಸ್ಥೆ ವಿದ್ಯಾರ್ಥಿಗಳಿಗೆ ನೀಡುತ್ತಿದೆ.” ಎಂದು ಅಭಿಮಾನ ವ್ಯಕ್ತ ಪಡಿಸಿದರು. ಗೀತಾ ಸರಳಾಯ ಮಾತನಾಡುತ್ತಾ ಯಾರೂ ಅವಕಾಶ ಕಲ್ಪಿಸದ ಏಕ ವ್ಯಕ್ತಿ ಪ್ರದರ್ಶನಕ್ಕೆ ಈ ಸಂಸ್ಥೆ ಈ ಕಾರ್ಯಕ್ರಮದಲ್ಲಿ ಅವಕಾಶ ಕಲ್ಪಿಸಿ ಕೊಟ್ಟಿದ್ದಾಗಿ ಅತೀವ ಸಂತೋಷ ವ್ಯಕ್ತಪಡಿಸಿ ಶುಭ ಹಾರೈಸಿದರು.
ಮುಂದೆ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಡಾ. ಸುಧೀಂದ್ರ ರಾವ್ ಮತ್ತು ನೃತ್ಯ ಗುರು ವಿದುಷಿ ಸೌಮ್ಯಾ ಸುಧೀಂದ್ರ ಜೊತೆಯಾಗಿ ಕೇಂದ್ರದ ವಿದುಷಿಯರಾದ ಮಂಗಳೂರು ಕೇಂದ್ರಕ್ಕೆ ನೃತ್ಯ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಸಿಂಚನಾ ಎಚ್.ಎಸ್. ಮತ್ತು ವಿದ್ವತ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಹೊಂದಿ ಹಲವಾರು ವರ್ಷಗಳಿಂದ ಈ ನೃತ್ಯ ಕೇಂದ್ರದ ನೃತ್ಯ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಧನೆ ಮಾಡಿದ ಡಾ. ಶ್ರೀರಕ್ಷಾ ರಮೇಶ್ ರಾವ್, ಶ್ರೀಲಕ್ಷ್ಮೀ ಭಟ್, ಭೂಮಿಕಾ ಶೆಟ್ಟಿ ಮತ್ತು ದೀಪ್ತಿ ದೇವಾಡಿಗ ಅವರಿಗೆ ‘ನೃತ್ಯ ಸುಧಾ ಕುಸುಮ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
‘ನೃತ್ಯೋತ್ಕರ್ಷ’ದ ವಿಶೇಷವೆಂದರೆ ನಿರೂಪಣೆಯ ಜೊತೆಗೆ ಅಭಿನಯ ನಿರೂಪಣೆ. ವಿದುಷಿ ರಚನಾ ಶೆಟ್ಟಿ, ವಿದುಷಿ ಭಾಗೀರತಿ ಎಂ. ಹಾಗೂ ವಿದುಷಿ ವೆನೆಸಾ ಮೊಂತೆರೊ ಮೂರು ಮಂದಿ ನಿರೂಪಕರು ಮತ್ತು ಸರ್ವಮಂಗಳಾ, ನವ್ಯಾ ಭಟ್, ಕಾವ್ಯಾ ಭಟ್ ಹಾಗೂ ಶ್ರಿಯಾ ರಾವ್ ಸಣ್ಣಯ್ಯ ನಾಲ್ಕು ಮಂದಿ ನೃತ್ಯ ಕಲಾವಿದರು ಅಭಿನಯ ನಿರೂಪಣೆಯನ್ನು ಮಾಡಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಕೇಂದ್ರದ ಸದಸ್ಯೆಯರಾದ ಭೂಮಿಕಾ ಶೆಟ್ಟಿ, ಶ್ರೀರಕ್ಷಾ ರಮೇಶ್ ರಾವ್, ದೀಪ್ತಿ ದೇವಾಡಿಗ, ಶ್ರೀಲಕ್ಷ್ಮೀ ಭಟ್, ಸಿಂಚನ ಎಚ್.ಎಸ್, ನಿಧಿ ಡಿ. ಶೆಟ್ಟಿ ಇವರು ಏಕವ್ಯಕ್ತಿ ಪ್ರದರ್ಶನವನ್ನು ಅದ್ಭುತವಾಗಿ ಪ್ರಸ್ತುತ ಪಡಿಸಿದರು.
ಜೈಷ್ಣವಿ ಆರ್, ಮಿತಾಲಿ ಜಿ.ಟಿ, ಐಶ್ವರ್ಯ ಭಟ್, ವಿನಂತಿ ಆಚಾರ್ಯ, ಚೇತನ ಆರ್.ಐತಾಳ್, ಮಾನ್ಯ ರಾವ್, ದ್ವಿತಿ ರಾವ್, ಯಶಸ್ವಿ ಅಳಕೆ, ಆಧ್ಯ ಶೆಟ್ಟಿ, ಆಧ್ಯ ಕೆ, ಶ್ರೇಯಾ ಎಮ್.ಭಟ್, ತಶ್ವಿ, ದೀಪ್ತಿ ರಾವ್, ನಿಕಿತ ಕಾಮತ್, ಅನ್ವಿತ ಶೆಣೈ, ಶ್ರೀಮ ಮನೋಹರ್, ಶ್ರಾವ್ಯಶ್ರೀ ಬಳ್ಳಾಲ್, ಯಜ್ಞ ಶೆಟ್ಟಿ, ಹಿಮಾನಿ, ವಿಜೇತ ಮೊಂತೆರೊ, ಸಹನ ಹತ್ವಾರ್, ಹರ್ಷಿತ ಆರ್. ಸಾಲಿಯಾನ್, ಸ್ನೇಹ ಆಚಾರ್ಯ ಇವರುಗಳು ಸಮೂಹ ನೃತ್ಯ ಪ್ರದರ್ಶನವನ್ನು ನೀಡಿ ತಮ್ಮ ಅಪೂರ್ವ ಪ್ರತಿಭೆಯಿಂದ ಪ್ರೇಕ್ಷಕರರನ್ನು ರಂಜಿಸಿದರು. ನೃತ್ಯಗುರು ವಿದುಷಿ ಸೌಮ್ಯಾ ಸುಧೀಂದ್ರ ರಾವ್ ವಂದನಾರ್ಪಣೆ ಗೈದರು.
6 Comments
ನಮ್ಮ ಕಾರ್ಯಕ್ರಮದ ಬಗ್ಗೆ ಬಹಳ ಸರಳ ಹಾಗೂ ವಿಸ್ತ್ರಿತ ವರದಿ ಮಾಡಿರುವ ರುವಾರಿ ತಂಡಕ್ಕೆ ನಮ್ಮ ಸಂಸ್ಥೆಯ ವತಿಯಿಂದ ಮನದಾಳದ ವಂದನೆಗಳು 🙏🏻
My heartful thanks to my teacher for giving us this wonderful opportunity to explore ourselves and for ruvari team for their wonderful description on our program😊🙏
Wow! so nicely explained the whole process till the end of the programme. Thanks for writing in an easy yet very beautiful manner.💗👏🏻
Really well-articulated blog !
Beautifully explained the whole program. Thank you 🙏
Thanks for writing it so beautifully….😍😍😍