ಮಂಗಳೂರು : ಸಂಗೀತ್ ಭಾರತಿ ಫೌಂಡೇಷನ್ (ರಿ.) ಪ್ರಸ್ತುತ ಪಡಿಸುವ ‘ವಿಹಂಗಮ’ ಕರ್ನಾಟಕ ಹಿಂದೂಸ್ತಾನಿ ಜುಗಲ್ ಬಂದಿ ಸಂಗೀತ ಕಾರ್ಯಕ್ರಮವನ್ನು ದಿನಾಂಕ 05 ಅಕ್ಟೋಬರ್ 2025ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ.
ವಿದ್ವಾನ್ ಮೈಸೂರು ಮಂಜುನಾಥ್ – ವಯೋಲಿನ್, ಉಸ್ತಾದ್ ರಫೀಕ್ ಖಾನ್ – ಸಿತಾರ್, ವಿದ್ವಾನ್ ತಿರುವಾರೂರ್ ಭಕ್ತವತ್ಸಲಂ – ಮೃದಂಗಂ ಹಾಗೂ ಓಜಸ್ ಅಧಿಯಾ – ತಬಲಾ ಇವರುಗಳು ಈ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.