ಸಾಗರ : ‘ನೀನಾಸಂ’ ಸಂಸ್ಥೆಯು ಹೆಗ್ಗೋಡುವಿನಲ್ಲಿ ಅಕ್ಟೋಬರ್ 01 ರಿಂದ 05 ರವರೆಗೆ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮ ಏರ್ಪಡಿಸಿದ್ದು, ರಂಗಭೂಮಿ, ಸಾಹಿತ್ಯ, ಸಿನಿಮಾ, ಚಿತ್ರಕಲೆ ಕಲಾಪಠ್ಯಗಳ ಪ್ರಸ್ತುತಿ ಮತ್ತು ಆ ಕುರಿತ ಚರ್ಚೆ ನಡೆಯಲಿದೆ.
ಆರಂಭಿಕ ಗೋಷ್ಠಿಗೆ ಹರೀಶ್ ತ್ರಿವೇದಿ ಚಾಲನೆ ನೀಡಲಿದ್ದು, ಕೃಷ್ಣಮೂರ್ತಿ ಹನೂರು, ರಾಜೇಂದ್ರ ಚೆನ್ನಿ, ಜೆ. ಯು. ಮೋಹನ್, ಚುಕ್ಕಿ ನಂಜುಂಡಸ್ವಾಮಿ, ಹೇಮಲತಾ ಜೈನ್, ಗಜಾನನ ಶರ್ಮ, ಶಿವಾನಂದ ಕಳವೆ, ಅಕ್ಷರ ಕೆ. ವಿ., ಶ್ರೀರಾಮ ಭಟ್, ನಿತ್ಯಾನಂದ ಶೆಟ್ಟಿ, ಜಿ.ಎಸ್. ಜಯದೇವ, ಸುಮನಸ ಕೌಜಲಗಿ, ವಿಕ್ರಮ್ ವಿಸಾಜಿ ಇತರರು ಪಾಲ್ಗೊಳ್ಳ ಲಿದ್ದಾರೆ. ನಿತ್ಯ ಸಂಜೆ 7ಕ್ಕೆ ನಾಟಕ ಪ್ರದರ್ಶನವಿದೆ ಎಂದು ಹೇಳಿಕೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Previous Articleಕದ್ರಿ ನೃತ್ಯ ವಿದ್ಯಾನಿಲಯದಲ್ಲಿ ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ಸಭೆ