ಮಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಮುಖ್ಯ ಪತ್ರಿಕೆ ನೀಡುವ ಪ್ರತಿಷ್ಠಿತ ‘ದೇವನಾಂ ಪ್ರಿಯ ಪ್ರಿಯದರ್ಶಿನಿ ಅಶೋಕ’ ಪ್ರಶಸ್ತಿಗೆ ರಿಪೋರ್ಟರ್ ಕರ್ನಾಟಕದ ಪ್ರಧಾನ ಸಂಪಾದಕ ಮಂಗಳೂರಿನ ಅಶೋಕ್ ಕಲ್ಲಡ್ಕ ಆಯ್ಕೆಯಾಗಿದ್ದಾರೆ.
ವಿಜಯ ಕರ್ನಾಟಕ, ಜನವಾಹಿನಿ, ಕೆನರಾ ಟೈಮ್ಸ್ ಭಾಗದಲ್ಲಿ ಉಪ ಸಂಪಾದಕ, ವರದಿಗಾರನಾಗಿ ಕಾರ್ಯನಿರ್ವಹಿಸಿದ ಅಶೋಕ್ ಕಲ್ಲಡ್ಕ ಅವರು 4 ವರ್ಷಗಳಿಂದ ರಿಪೋರ್ಟರ್ ಕರ್ನಾಟಕ ಮೀಡಿಯಾ ನೆಟ್ ವರ್ಕ್ ಸಂಸ್ಥೆ ಸ್ವಾಮ್ಯ, ‘ರಿಪೋರ್ಟರ್ ಕರ್ನಾಟಕ’ ಎಂಬ ಡಿಜಿಟಲ್ ಮೀಡಿಯಾ ನಡೆಸಿಕೊಂಡು ಬರುತ್ತಿದ್ದಾರೆ.
ಪತ್ರಿಕಾ ರಂಗದಲ್ಲಿ ಅಶೋಕ್ ಕಲ್ಲಡ್ಕ ಅವರ ಸಾಧನೆಯನ್ನು ಗುರುತಿಸಿ ಅವರಿಗೆ ಈ ವರ್ಷದ ದೇವನಾಂ ಪ್ರಿಯ ಪ್ರಿಯದರ್ಶಿನಿ ಅಶೋಕ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಅಶೋಕ್ ಕಲ್ಲಡ್ಕ ಅವರಿಗೆ ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿಯು ಲಭಿಸಿದೆ.
ರಾಯಚೂರಿನ ಮಸ್ಕಿಯ ಮುರುಘ ರಾಜೇಂದ್ರ ಕಲ್ಯಾಣ ಮಂಟಪದಲ್ಲಿ ಸೆ. 28ರಂದು ವಿಶ್ವ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪತ್ರಕರ್ತರ ಧ್ವನಿಯ ರಾಜ್ಯಾಧ್ಯಕ್ಷ ಬಂಗ ಮಲ್ಲಿಕಾರ್ಜುನ, ಮಸ್ಕಿ ತಾಲೂಕು ಅಧ್ಯಕ್ಷ ವಿರೂಪಾಕ್ಷ ಸ್ವಾಮಿ ಸಾಲಿಮಠ ಉಪಸ್ಥಿತರಿರುವರು.
Subscribe to Updates
Get the latest creative news from FooBar about art, design and business.
Previous Article‘ನೀನಾಸಂ’ನಲ್ಲಿ’ ಕಲೆಗಳ ಸಂಗಡ ಮಾತುಕತೆ’ | ಅಕ್ಟೋಬರ್ 01