ಬೆಂಗಳೂರು : ಬಿ.ಕೆ.ಎಫ್. ಪ್ರಸ್ತುತ ಪಡಿಸುವ 20ನೇ ‘ಧ್ವನಿ’ ಸಂಗೀತ ಕಾರ್ಯಕ್ರಮವನ್ನು ದಿನಾಂಕ 04 ಮತ್ತು 05 ಅಕ್ಟೋಬರ್ 2025ರಂದು ಬೆಂಗಳೂರು ಕೆ.ಆರ್. ರೋಡಿನಲ್ಲಿರುವ ಬೆಂಗಳೂರು ಗಾಯನ ಸಮಾಜದಲ್ಲಿ ಆಯೋಜಿಸಲಾಗಿದೆ. ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಹಿಂದೂಸ್ತಾನಿ ಸಂಗೀತ ಉತ್ಸವ -2025 ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ದಿನಾಂಕ 04 ಅಕ್ಟೋಬರ್ 2025ರಂದು ಸಂಜೆ 5-00 ಗಂಟೆಗೆ ವಿದುಷಿ ಆರತಿ ಅಂಕಲಿಕರ ಮತ್ತು ವಿದುಷಿ ಮಂಜೂಷ ಪಾಟೀಲ್ ಇವರ ಜುಗಲ್ ಬಂದಿ ಹಾಡುಗಾರಿಕೆಗೆ ಪಂಡಿತ್ ರವೀಂದ್ರ ಯವಾಗಲ್ ತಬಲಾ ಮತ್ತು ಪಂಡಿತ್ ವ್ಯಾಸಮೂರ್ತಿ ಕಟ್ಟಿ ಇವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ವಿದುಷಿ ಎನ್. ರಾಜಾಂ ಇವರಿಗೆ ‘ಬಿ.ಕೆ.ಎಫ್. ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿಯನ್ನು ನೀಡಲಾಗುವುದು. 8-00 ಗಂಟೆಗೆ ವಿದುಷಿ ಎನ್. ರಾಜಾಂ, ವಿದುಷಿ ಸಂಗೀತ ಶಂಕರ್, ರಾಗಿಣಿ ಮತ್ತು ನಂದಿನಿ ಶಂಕರ್ ಇವರಿಂದ ‘ವಯೋಲಿನ್ ಟ್ರಿಯೋ’ಗೆ ಪಂಡಿತ್ ಶುಭ ಮಹಾರಾಜ್ ಮತ್ತು ಪಂಡಿತ್ ಅಭಿಷೇಕ್ ಮಿಶ್ರಾ ಇವರು ತಬಲಾದಲ್ಲಿ ಸಹಕರಿಸಲಿದ್ದಾರೆ.
ದಿನಾಂಕ 05 ಅಕ್ಟೋಬರ್ 2025ರಂದು ಬೆಳಗ್ಗೆ 9-30 ಗಂಟೆಗೆ ಪಂಡಿತ್ ವಿನಾಯಕ್ ತೊರ್ವಿ ಇವರ ಹಾಡುಗಾರಿಕೆಗೆ ಯೋಗೀಶ್ ಭಟ್ ತಬಲಾ ಮತ್ತು ಪಂಡಿತ್ ರವೀಂದ್ರ ಕತೋಟಿ ಹಾರ್ಮೋನಿಯಂ ಹಾಗೂ ಶ್ರೀಮತಿ ವಿಶಾಕ ಹರಿ ಇವರ ಹಾಡುಗಾರಿಕೆಗೆ ರಾಮಕೃಷ್ಣನ್ ಎಲ್. ಇವರು ವಯೋಲಿನ್, ಚಂದ್ರಜಿತ್ ಇವರು ತಬಲಾ ಮತ್ತು ಸತೀಶ್ ಕೊಲ್ಲಿ ಇವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಸಂಜೆ 4-30 ಗಂಟೆಗೆ ಪಂಡಿತ್ ಜಗದೀಶ್ ಕುರ್ತಕೋಟಿ ಮತ್ತು ತಂಡದವರಿಂದ ‘ಕಾಶಿ ಡಮರು’ ತಾಳ ವಾದ್ಯ ವಾದನ ಪ್ರಸ್ತುತ ಗೊಳ್ಳಲಿದೆ. ಪಂಡಿತ್ ಪ್ರವೀಣ್ ಗೊಡ್ಖಿಂಡಿ ಇವರ ಕೊಳಲು ಮತ್ತು ಪಂಡಿತ್ ಜಯತೀರ್ಥ ಮೇವುಂಡಿ ಇವರ ಹಾಡುಗಾರಿಕೆಯ ಜುಗಲ್ ಬಂದಿಗೆ ಪಂಡಿತ್ ರಾಜೇಂದ್ರ ನಾಕೋಡ್ ತಬಲಾ ಸಾಥ್ ನೀಡಲಿದ್ದಾರೆ. ಪಂಡಿತ್ ವಿಶ್ವ ಮೋಹನ್ ಭಟ್ ಇವರ ಮೋಹನವೀಣೆ, ಪಂಡಿತ್ ಅಜಯ್ ಪ್ರಸನ್ನಾ ಇವರ ಕೊಳಲು ಮತ್ತು ಪಂಡಿತ್ ತರುಣ್ ಭಟ್ಟಾಚಾರ್ಯ ಇವರ ಸಂತೂರ್ ಟ್ರಿಯೋ ಜುಗಲ್ ಬಂದಿಗೆ ಪಂಡಿತ್ ಅಭಿಷೇಕ್ ಮಿಶ್ರಾ ತಬಲಾದಲ್ಲಿ ಸಹಕರಿಸಲಿದ್ದಾರೆ.