ಮಡಿಕೇರಿ : ಮಡಿಕೇರಿಯ ಹೊಸ ಬಡಾವಣೆಯ ಅಶೋಕ ಭವನದಲ್ಲಿ ಮೊಣ್ಣಂಡ ಶೋಭಾ ಸುಬ್ಬಯ್ಯನವರ ಪ್ರಾಯೋಜಕತ್ವದಲ್ಲಿ ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ವತಿಯಿಂದ ದಿನಾಂಕ 28 ಸೆಪ್ಟೆಂಬರ್ 2025ರಂದು ‘ಕಾವ್ಯ ಕಮ್ಮಟ’ ನಡೆಯಿತು.
ಹಿರಿಯ ಕವಯಿತ್ರಿ ಮೊಣ್ಣಂಡ ಶೋಭಾ ಸುಬ್ಬಯ್ಯಬವರು ಅಧ್ಯಕ್ಷತೆ ವಹಿಸಿದ್ದರು. ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ಬಳಗದ ಸಂಸ್ಥಾಪಕರಾದ ವೈಲೇಶ ಪಿ.ಎಸ್. ಕೊಡಗು ಉದ್ಘಾಟನೆ ಮಾಡಿದರು. ಕನ್ನಡ ಸಿರಿ ಬಳಗದ ಅಧ್ಯಕ್ಷರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರು ಆದ ಬಿ.ಎಸ್. ಲೋಕೇಶ್ ಸಾಗರ್‌ರವರು ಪ್ರಸ್ತಾವಿಕ ನುಡಿಗಳನ್ನಾಡಿದರು. ಖ್ಯಾತ ಕವಿಗಳಾದ ಡಾ. ಜಯಪ್ಪ ಹೊನ್ನಾಳಿ ಮೈಸೂರು ಇವರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಗಿರೀಶ್ ಎಸ್. ಕಿಗ್ಗಾಲು, ಪುಷ್ಪ ಡಿ.ಹೆಚ್. ಮಡಿಕೇರಿ. ಲೋಕೇಶ್ ಹೆಚ್.ಡಿ. ವಿರಾಜಪೇಟೆ, ಪುಷ್ಪ ಶಿವರಾಂ ರೈ, ಹೇಮಂತ್ ಪಾರೇರಾ, ಶಶಿಕಲಾ ಗಿರೀಶ್ ಕಿಗ್ಗಾಲು, ಶೋಭಾ ರಕ್ಷಿತ್ ಮಡಿಕೇರಿ, ವಿಜಯಶ್ರೀ ಅನಿಲ್ ಕೆದಿಲಾಯ ಕುಶಾಲನಗರ, ವಿನಯಾ ರಾಜಶೇಖರ್, ಲಲಿತಾ ಎಂ.ಕೆ., ಶರ್ಮಿಳಾ ರಮೇಶ್ ಸೋಮವಾರಪೇಟೆ, ಪದ್ಮಾವತಿ ಸೋಮವಾರಪೇಟೆ, ಕವಿತಾ ಜನಾರ್ದನ ಸೋಮವಾರಪೇಟೆ, ಮಮತಾ ರಾಜೇಶ್ ಮುಳ್ಳುಸೋಗೆ, ಗೀತಾಂಜಲಿ ಎನ್.ಎಮ್. ಸೋಮವಾರಪೇಟೆ, ಶಿವದೇವಿ ಅವನೀಶ್ಚಂದ್ರ, ರತ್ನಾವತಿ ತಲಂಜೇರಿ, ನಳಿನಿ ಹೆಚ್.ಆರ್. ಪೊನ್ನಂಪೇಟೆ ಭಾಗವಹಿಸಿದರು. ಗಿರೀಶ್ ಕಿಗ್ಗಾಲುರವರು ಸ್ವಾಗತಿಸಿ, ಮಮತಾ ರಾಜೇಶ್ ನಿರೂಪಣೆ ಮಾಡಿ ವಂದನಾರ್ಪಣೆ ಮಾಡಿದರೆ ಶರ್ಮಿಳಾ ರಮೇಶ್ ಪ್ರಾರ್ಥನೆ ಮಾಡಿದರು.