ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇವರ ವತಿಯಿಂದ ನಡೆಯುವ ತಿಂಗೊಳ್ದ ಗೇನದ ಕೂಟ -2 ಗಾಂಧಿ ಜಯಂತಿ ನೆನೆಪಿನಲ್ಲಿ ‘ತುಳುನಾಡ್ ಡ್ ಲೋಕಮಾನ್ಯೆರ್’ ಕಜ್ಜಕೊಟ್ಯ ಬೊಕ್ಕ ಪಾತೆರಕತೆ ಲೇಸ್ ಕಾರ್ಯಕ್ರಮವನ್ನು ದಿನಾಂಕ 04 ಅಕ್ಟೋಬರ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಮಂಗಳೂರಿನ ಉರ್ವಸ್ಟೋರ್ ತುಳುಭವನದ ಅಮೃತ ಸೋಮೇಶ್ವರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದಕ್ಷಿಣ ಕನ್ನಡ ಕೊರಗರ ಜಿಲ್ಲಾ ಸಂಘ (ರಿ.) ಇದರ ಅಧ್ಯಕ್ಷರಾದ ಎಂ. ಸುಂದರ ಬೆಳುವಾಯಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಗೋಷ್ಠಿ 1ರಲ್ಲಿ ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ವಾಸುದೇವ ಬೆಳ್ಳೆ ಇವರು ಮತ್ತು ಗೋಷ್ಠಿ 2ರಲ್ಲಿ ಅಧ್ಯಾಪಕರಾದ ಅರವಿಂದ ಚೊಕ್ಕಾಡಿ ಇವರು ವಿಷಯ ಮಂಡನೆ ಮಾಡಲಿದ್ದಾರೆ.