ಕೋಣಾಜೆ : ಮಂಗಳೂರು ವಿಶ್ವವಿದ್ಯಾಲಯ ಮಂಗಳಗಂಗೋತ್ರಿಯ ಎನ್.ಜಿ. ಪಾವಂಜೆ ಲಲಿತಕಲಾ ಪೀಠ ಇದರ ವತಿಯಿಂದ ಕರಾವಳಿ ಚಿತ್ರಕಲಾ ಚಾವಡಿ (ರಿ.) ಮಂಗಳೂರು ಇವರ ಸಹಕಾರದೊಂದಿಗೆ ‘ಕಲಾ ದರ್ಪಣ’ ಭಾವಚಿತ್ರ ರಚನೆ ಮತ್ತು ಸೃಜನಾತ್ಮಕ ಚಿತ್ರಕಲಾ ಶಿಬಿರವು ದಿನಾಂಕ 03 ಮತ್ತು 04 ಅಕ್ಟೋಬರ್ 2025ರಂದು ಮಂಗಳೂರು ವಿವಿಯ ವಿಜ್ಞಾನ ಸಂಕೀರ್ಣದ ಮುಂಭಾಗದ ಪರಿಸರದಲ್ಲಿ ನಡೆಯಲಿದೆ.
ದಿನಾಂಕ 03 ಅಕ್ಟೋಬರ್ 2025ರಂದು ಬೆಳಗ್ಗೆ 10-30 ಗಂಟೆಗೆ ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಇವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಉದ್ಯಮಿ ಪ್ರಶಾಂತ್ ಶೇಟ್, ಮಂಗಳೂರು ವಿ.ವಿ. ಕುಲಸಚಿವ ಕೆ. ರಾಜು ಮೊಗವೀರ ಇವರು ಭಾಗವಹಿಸಲಿದ್ದು, ಕರಾವಳಿ ಚಿತ್ರಕಲಾ ಚಾವಡಿಯ ಅಧ್ಯಕ್ಷರಾದ ಕೋಟಿ ಪ್ರಸಾದ್ ಆಳ್ವ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ದಿನಾಂಕ 04 ಅಕ್ಟೋಬರ್ 2025ರಂದು ಬೆಳಿಗ್ಗೆ 10-00 ಗಂಟೆಗೆ ‘ಕಲಾಸ್ವಾದನೆಯ ವಿಭಿನ್ನ ನೆಲೆಗಳು’ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವು ಕನ್ನಡ ವಿಭಾಗದ ಸೆಮಿನಾರ್ ಹಾಲ್‌ನಲ್ಲಿ ನಡೆಯಲಿದ್ದು, ಹಿರಿಯ ಕಲಾವಿದ ಸಕು ಪಾಂಗಳ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಎಸ್‌ವಿಪಿ ಕನ್ನಡ ಅಧ್ಯಯನ ವಿಭಾಗದ ಅಧ್ಯಕ್ಷರಾದ ಪ್ರೊ. ನಾಗಪ್ಪ ಗೌಡ ಇವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಸಂಜೆ 4-00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಂಗಳೂರು ಮಹಾ ನಗರ ಪಾಲಿಕೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ನಾಗರಾಜು ಆರ್.ಬಿ. ಇವರು ಭಾಗವಹಿಸಲಿದ್ದು, ಕರಾವಳಿ ಚಿತ್ರಕಲಾ ಚಾವಡಿಯ ಗೌರವಾಧ್ಯಕ್ಷ ಗಣೇಶ ಸೋಮಯಾಜಿ ಉಪಸ್ಥಿತರಿರಲಿದ್ದು, ಹಿರಿಯ ಕಲಾವಿದ ರಮೇಶ್ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಎರಡು ದಿನಗಳ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ರಮೇಶ್ ರಾವ್ ಉಡುಪಿ, ಬಾಬುರಾವ್ ನಾಡೋಣಿ ಬೆಳಗಾವಿ, ಸೈಯದ್ ಅಸಿಫ್ ಆಲಿ ಮಂಗಳೂರು, ಸಕು ಪಾಂಗಳ ಉಡುಪಿ ಇವರು ಭಾಗವಹಿಸಲಿದ್ದಾರೆ. ಕರಾವಳಿ ಚಿತ್ರಕಲಾ ಚಾವಡಿಯ ಕಲಾವಿದರಾದ ಶರತ್ ಹೊಳ್ಳ, ಗಿಲಿಯಾಳ ಜಯರಾಮ ಭಟ್, ಗಣೇಶ್ ಸೋಮಯಾಜಿ. ಅನಂತ ಪದ್ಮನಾಭ ರಾವ್, ಈರಣ್ಣ ತಿಪ್ಪಣ್ಣನವರ, ಮನೋರಂಜಿನಿ, ಸಪ್ನ ನೊರೋನ್ಹ, ಜಯಶ್ರೀ ಶರ್ಮ, ಖುರ್ಷಿದ್ ಯಾಕೂಬ್, ಡಾ. ಎಸ್.ಎಂ. ಶಿವಪ್ರಕಾಶ್, ಡಾ. ಸುಜೋತ ಧರ್ಮ, ರೂಪಾ ವಸುಂದರ ಆಚಾರ್ಯ, ನವೀನ್ ಚಂದ್ರ ಬಂಗೇರ, ಡಾ. ಜಯಪ್ರಕಾಶ್ ಮೊದಲಾದವರು ಉಪಸ್ಥಿತರಿರಲಿದ್ದಾರೆ ಎಂದು ಕರಾವಳಿ ಚಿತ್ರಕಲಾ ಚಾವಡಿಯ ಕಾರ್ಯದರ್ಶಿ ಡಾ. ಎಸ್.ಎಂ. ಶಿವಪ್ರಕಾಶ್ ಹಾಗೂ ಎನ್.ಜಿ. ಪಾವಂಜೆ ಪೀಠದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ತಿಳಿಸಿದ್ದಾರೆ.