ಸುಳ್ಯ : ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಸುಳ್ಯದ ಸಾಹಿತಿ ನಿರಂಜನರ ಜನ್ಮ ಶತಮಾನೋತ್ಸವದ ವೈಯುಕ್ತ “ನಿರಂಜನ ಬದುಕು – ಬರಹ ನೆನಪು” ಕಾರ್ಯಕ್ರಮವನ್ನು ಕಾಲೇಜಿನ ಕನ್ನಡ ಸಂಘ ಹಾಗೂ ಕನ್ನಡ ವಿಭಾಗದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ಹಾಗೂ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ ದಿನಾಂಕ 25 ಸೆಪ್ಟೆಂಬರ್ 2025 ರಂದು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಕೆನರಾ ಬ್ಯಾಂಕಿನ ನಿವೃತ್ತ ಜನರಲ್ ಮ್ಯಾನೇಜರ್ ವೆಂಕಟೇಶ್ ಪ್ರಭು ಅವರು ಉದ್ಘಾಟಿಸಿ ನಾಹಿತ್ಯ ಕ್ಷೇತ್ರದ ಮೂಲಕ ಸುಳ್ಯವನ್ನು ಜಗತ್ತಿಗೆ ಪರಿಚಯಿಸಿದನ್ನು ಅವರ ಮನೆಯವರಿಗೂ ನಿರಂಜನರಿಗೂ ಇದ್ದ ನಂಟನ್ನು ನೆನಪಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ. ಎಂ. ಮಾತನಾಡಿ “ಸಾಹಿತ್ಯ ದಿಗ್ಗಜ ನಿರಂಜನರು ಸುಳ್ಯದವರು ಎನ್ನುವುದು ಸುಳ್ಯದ ಹೆಮ್ಮೆ” ಎಂದು ಕೊಂಡಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ನಿವೃತ್ತ ಪ್ರಾಂಶುಪಾಲರಾದ ಅಶೋಕ ಕುಮಾರ್ ಮೂಲೆಮಜಲು ಅವರು ನಿರಂಜನರ ಬದುಕು-ಬರಹ : ನೆನವು ವಿಷಯದ ಕುರಿತು ಮಾತನಾಡಿ “ಸಮಾಜದ ಕಟು ಸತ್ಯಗಳನ್ನು ಅಕ್ಷರ ರೂಪಿಕ್ಕಿಳಿಸಿದುದಲ್ಲದೇ ತನ್ನ ಜೀವನವನ್ನೇ ಸಾಹಿತ್ಯವಾಗಿಸಿದವರು” ಎಂದು ಅವರ ಬದುಕು ಬರಹಗಳನ್ನು ವಿಮರ್ಶಿಸಿದರು.
ವಿದ್ಯಾರ್ಥಿಗಳಿಂದ ನಡೆದ ನಿರಂಜನರ ಸಾಹಿತ್ಯ ವಿಮರ್ಶೆಯಲ್ಲಿ ನೆಹರೂ ಮೆಮೋರಿಯಲ್ ಕಾಲೇಜಿನ ಕು. ಅಂಬಿಕಾ ಎಂ. ವಿ. ಇವರು ‘ರಂಗಮ್ಮನ ವಠಾರ’ ಕಾದಂಬರಿಯ ಕುರಿತು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಳದ ಕು. ಭಾಗ್ಯಶ್ರೀ ಕೆ. ಡಿ. ಇವರು ‘ಕೊನೆಯ ಗಿರಾಕಿ’ ಕಥೆಯ ಕುರಿತು, ಬೆಳ್ಳಾರೆಯ ಡಾ. ಕೆ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಕು.ಆಜ್ಞಾಶ್ರೀ ರೈ. ಡಿ. ಇವರು ‘ಚಿರಸ್ಮರಣೆ’ ಕಾದಂಬರಿಯ ಕುರಿತು, ಕೆ. ಎಸ್. ಎಸ್. ಪದವಿ ಕಾಲೇಜು ಸುಬ್ರಹ್ಮಣ್ಯದ ಕು. ಸಂಖ್ಯಾ ಜಿ. ಸಿ. ಇವರು ‘ಕಲ್ಯಾಣ ಸ್ವಾಮಿ’ ಕಾದಂಬರಿಯ ಕುರಿತು ಪ್ರಬಂಧ ಮಂಡಿಸಿದರು. ಸುಳ್ಯದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಕಾಲೇಜಿನ ಆಡಳಿತಾಧಿಕಾರಿಳಾದ ಚಂದ್ರಶೇಖರ ಪೇರಾಲು, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ. ಐಕ್ಯೂಎಸಿ ಸಂಚಾಲಕಿ ಡಾ. ಮಮತಾ ಕೆ. ಕನ್ನಡ ವಿಭಾಗದ ಮುಖ್ಯಸ್ಥ ಸಂಜೀವ ಕುಬ್ಬಾಜೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಗಲಿದ ಮೇರು ಸಾಹಿತಿ ಎಸ್. ಎಲ್. ಭೈರಪ್ಪರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾಲೇಜಿನ ಕನ್ನಡ ಸಂಘದ ಸಂಚಾಲಕರು ಹಾಗೂ ಕಾರ್ಯಕ್ರಮ ಸಂಯೋಜಕರಾದ ಡಾ. ಅನುರಾಧಾ ಕುರುಂಜಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಅಭಿಷೇಕ್, ಕವನ ಅವರ ಕನ್ನಡ ಗೀತಾ ಗಾಯನದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಧನ್ಯಶ್ರೀ ಸ್ವಾಗತಿಸಿ, ಯಶಿತಾ ಕಾರ್ಯಕ್ರಮ ನಿರೂಪಿಸಿ, ಲಿಖಿತಾ ವಂದಿಸಿದರು. ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಬೋಧಕೇತರ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಯಕಿತಾ, ಚಸ್ಮಿತಾ, ರಕ್ಷಿತಾ, ನೈನಾ, ಶ್ರೀಷ್ಮಾ, ಅಭಿವೇಕ್, ಅಂಬಿಕಾ ಸಹಕರಿಸಿದರು.
Subscribe to Updates
Get the latest creative news from FooBar about art, design and business.