ಹುಬ್ಬಳ್ಳಿ : 2025ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಸಂತೆಬೆನ್ನೂರು ಫೈಜ್ನಟ್ರಾಜ್ ಇವರ ‘ಮಡಿಲ ಕೂಸಿಗೆ ಮಣ್ಣಿನ ಸೆರಗು’ ಎಂಬ ಕವನ ಸಂಕಲನದ ಹಸ್ತಪ್ರತಿ ಆಯ್ಕೆಯಾಗಿದೆ. ಪ್ರಶಸ್ತಿ ರೂ.10,000/- ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ.
ವಿಮರ್ಶಕರಾದ ಸಿರಾಜ್ ಅಹಮದ್ ಮತ್ತು ವಿಜಯಾ ಗುತ್ತಲ ಇವರು ತೀರ್ಪುಗಾರರಾಗಿದ್ದರು. ದಾವಣಗೆರೆ ಜಿಲ್ಲೆ ಸಂತೆಬೆನ್ನೂರಿನ ಫೈಜ್ನಟ್ರಾಜ್ ಇವರು ಡಯಟ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿ ಹಲವು ಪ್ರಶಸ್ತಿಗಳು ಸಂದಿವೆ ಎಂದು ವಿಭಾ ಸಾಹಿತ್ಯ ಪ್ರಶಸ್ತಿಯ ಸಂಚಾಲಕಿ ಸುನಂದಾ ಪ್ರಕಾಶ ಕಡಮೆ ತಿಳಿಸಿದ್ದಾರೆ.