ನಾರಾವಿ : ನವರಾತ್ರಿಯ ಪ್ರಯುಕ್ತ ದಿನಾಂಕ 28 ಸೆಪ್ಟೆಂಬರ್ 2025ರಂದು ನಾರಾವಿಯ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಮಧೂರು ಮೋಹನ ಕಲ್ಲೂರಾಯ ಇವರಿಂದ ‘ಪುರಂದರದಾಸರು’ ಎಂಬ ಹರಿಕಥಾ ಕಾಲಕ್ಷೇಪವು ನಡೆಯಿತು. ವಿಶಾಖ ಆಚಾರ್ಯ ತಬ್ಲದಲ್ಲಿ ಸಹಕರಿಸಿದರು. ಸಹಗಾಯನದಲ್ಲಿ ಶ್ರೀಮತಿ ಸುವರ್ಣ ಕುಮಾರಿ, ಸುಮಂಗಲ ಕುಂಟಿನಿ, ವಿದ್ಯಾ ನಾರಾವಿ ಪಾಲ್ಗೊಂಡರು.