ಮೈಸೂರು : ಜನಮನ ಸಾಂಸ್ಕೃತಿಕ ಸಂಘಟನೆ ಮೈಸೂರು ಪ್ರಸ್ತುತ ಪಡಿಸುವ ಪಿ. ಲಂಕೇಶರ ಕಥೆಯಾಧಾರಿತ ‘ಕಲ್ಲು ಕರಗುವ ಸಮಯ’ ನಾಟಕ ಪ್ರದರ್ಶನವನ್ನು ದಿನಾಂಕ 05 ಅಕ್ಟೋಬರ್ 2025ರಂದು ಸಂಜೆ 6-30 ಗಂಟೆಗೆ ಮೈಸೂರು ರಾಮಕೃಷ್ಣ ನಗರದ ರಮಾಗೋವಿಂದ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರಗತಿಪರ ಚಿಂತಕರಾದ ಡಾ. ಸಬೀಹಾ ಭೂಮಿಗೌಡ ಮತ್ತು ಭೂಮಿಗೌಡರವರು ನಾಟಕಕ್ಕೆ ಚಾಲನೆ ನೀಡಲಿದ್ದು, ಕೆ.ಆರ್. ಸುಮತಿ ಇವರು ರಂಗರೂಪ, ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 94489 71900 ಮತ್ತು 99457 80989 ಸಂಖ್ಯೆಯನ್ನು ಸಂಪರ್ಕಿಸಿರಿ.