ಧಾರವಾಡ : ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ (ರಿ.) ಧಾರವಾಡ ಇದರ ವತಿಯಿಂದ ವಿಶೇಷ ಉಪನ್ಯಾಸ ಹಾಗೂ ಸಂಗೀತ-ನೃತ್ಯ ಕಾರ್ಯಕ್ರಮವನ್ನು ದಿನಾಂಕ 05 ಅಕ್ಟೋಬರ್ 2025ರಂದು ಸಂಜೆ 5-00 ಗಂಟೆಗೆ ಧಾರವಾಡ ಸಾಧನಕೇರಿಯ ಡಾ. ದ.ರಾ. ಬೇಂದ್ರೆ ಭವನದಲ್ಲಿ ಆಯೋಜಿಲಾಗಿದೆ.
ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಇದರ ಅಧ್ಯಕ್ಷರಾದ ಡಾ. ಸರಜೂ ಕಾಟ್ಕರ್ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಧಾರವಾಡದ ಸಾಹಿತಿ ಡಾ. ಕೃಷ್ಣ ಕಟ್ಟಿ ಇವರು ‘ಬೇಂದ್ರೆಯವರ ಕಾವ್ಯದಲ್ಲಿ ಮಾತೃಕೆಯರು’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಧಾರವಾಡದ ನಾದಸುರಭಿ ಸಾಂಸ್ಕೃತಿಕ ಅಕಾಡೆಮಿಯ ಡಾ. ಜ್ಯೋತಿಲಕ್ಷ್ಮೀ ಕೂಡ್ಲಿಗಿ ಮತ್ತು ವೃಂದದವರಿಂದ ಭಾವಗೀತೆ ಗಾಯನ, ಧಾರವಾಡದ ಭರತ ನೃತ್ಯ ಅಕಾಡೆಮಿ ಕಲಾತಂಡದ ವಿದ್ವಾನ್ ರಾಜೇಂದ್ರ ಎನ್. ಟೊಣಪಿ ಮತ್ತು ತಂಡದವರಿಂದ ಡಾ. ದ.ರಾ. ಬೇಂದ್ರೆಯವರ ಗೀತೆಗಳಿಗೆ ನೃತ್ಯ ಪ್ರಸ್ತುತಗೊಳ್ಳಲಿದೆ.