ಉಡುಪಿ : ರಾಜ್ಯದ ಪ್ರತಿಷ್ಠಿತ ಹವ್ಯಾಸಿ ನಾಟಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ ‘ರಂಗಭೂಮಿ (ರಿ.) ಉಡುಪಿ ಇದರ 60ನೇ ವಾರ್ಷಿಕ ಮಹಾಸಭೆಯು ದಿನಾಂಕ 20 ಸೆಪ್ಟೆಂಬರ್ 2025ರಂದು ಉಡುಪಿ ಹೊಟೇಲ್ ಡಯಾನಾದಲ್ಲಿ ಜರುಗಿತು.
ರಂಗಭೂಮಿ (ರಿ.) ಉಡುಪಿ ಇದರ 2025-26ನೇ ಸಾಲಿನ ಮಾರ್ಗದರ್ಶಕರಾಗಿ ಡಾ. ಹೆಚ್. ಶಾಂತರಾಮ್, ಗೌರವಾಧ್ಯಕ್ಷರಾಗಿ ಡಾ. ಹೆಚ್.ಎಸ್. ಬಲ್ಲಾಳ್, ಅಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ, ಉಪಾಧ್ಯಕ್ಷರಾಗಿ ಭಾಸ್ಕರ ರಾವ್ ಕಿದಿಯೂರು ಹಾಗೂ ಎನ್. ರಾಜಗೋಪಾಲ ಬಲ್ಲಾಳ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ ಚಂದ್ರ ಕುತ್ಪಾಡಿ, ಜೊತೆ ಕಾರ್ಯದರ್ಶಿಯಾಗಿ ಶ್ರೀಪಾದ ಹೆಗಡೆ ಹಾಗೂ ವಿವೇಕಾನಂದ ಎನ್., ಕೋಶಾಧಿಕಾರಿಯಾಗಿ ಭೋಜ ಯು. ಆಯ್ಕೆಯಾದರು.
ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಪೂರ್ಣಿಮಾ ಸುರೇಶ್, ವಿದ್ಯಾವಂತ ಆಚಾರ್ಯ, ಹೆಚ್. ಜಯಪ್ರಕಾಶ್ ಕೆದ್ಲಾಯ, ಗಿರೀಶ್ ತಂತ್ರಿ, ಡಾ. ವಿಷ್ಣುಮೂರ್ತಿ ಪ್ರಭು, ಆನಂದ ಮೇಲಂಟ, ಅಮಿತಾಂಜಲಿ ಕಿರಣ್, ಕೆ. ರವೀಂದ್ರ ಆಚಾರ್ಯ, ರವೀಂದ್ರ ಶೆಟ್ಟಿ ಕಡೆಕಾರು, ಹರೀಶ್ ಜೆ. ಕಲ್ಮಾಡಿ, ತಲ್ಲೂರು ಶಿವಪ್ರಸಾದ್ ಶೆಟ್ಟಿ ಹಾಗೂ ಕಾರ್ತಿಕ್ ಪ್ರಭು ಹಾಗೂ ಗೌರವ ಸಲಹಾ ಸಮಿತಿ ಸದಸ್ಯರಾಗಿ ಯು. ದಾಮೋದರ್, ಕೆ. ಗೋಪಾಲ್, ಕೆ. ಲಕ್ಷ್ಮೀ ನಾರಾಯಣ ಭಟ್, ಭುವನಪ್ರಸಾದ್ ಹೆಗ್ಡೆ, ಯು. ವಿಶ್ವನಾಥ ಶೆಣೈ, ಕುತ್ಪಾಡಿ ವಿಠಲ ಗಾಣಿಗ ಹಾಗೂ ಬೆಳಗೋಡು ರಮೇಶ್ ಭಟ್ ಆಯ್ಕೆಯಾದರು.
ವಿಶೇಷ ಆಹ್ವಾನಿತರಾಗಿ ಡಾ. ಮಾಧವಿ ಭಂಡಾರಿ, ರವಿರಾಜ್ ನಾಯಕ್, ರಂಜನ್ ಕಲ್ಕೂರ, ಸುಭಾಶ್ ಕೊರಂಗ್ರಪಾಡಿ, ಸುಬ್ರಹ್ಮಣ್ಯ ಸೇರಿಗಾರ್, ರೇವತಿ ನಾಡಗೀರ, ತುಮರಿ ಪ್ರಭಾಕರ ಜಿ.ಪಿ, ಜಯಕರ್ ಮಣಿಪಾಲ, ಸೂರ್ಯಪ್ರಕಾಶ್, ಸಂದೀಪ್ ಕುಮಾರ್ ಎಂ., ಶ್ರೀನಿವಾಸ ಆಚಾರ್ಯ, ಹೆಚ್. ನರಸಿಂಹಮೂರ್ತಿ ರಾವ್, ಡಾ. ಪಿ.ಬಿ. ಪ್ರಸನ್ನ, ಆದ್ಯತಾ ಭಟ್, ವಿದ್ಯಾ ಶಾಮ ಸುಂದರ್, ರಾಘವ ಬಿ. ಪ್ರೀತಮ್ ನಾಯಕ್, ಅಕ್ಷಯ್ ಭಟ್, ವಿಶ್ವನಾಥ್ ಕಟ್ಟೆಗುಡ್ಡೆ ಆಯ್ಕೆಯಾದರು.