ಮೈಸೂರು : ಕಲಾಸುರುಚಿ ಮೈಸೂರು ಇದರ ವತಿಯಿಂದ ‘ಕಥೆ ಕೇಳೋಣ ಬನ್ನಿ’ ಕಾರ್ಯಕ್ರಮದ 900ನೇ ವಿಶೇಷ ಸಂಚಿಕೆಯ ಸಂಭ್ರಮದ ಆಚರಣೆಯನ್ನು ದಿನಾಂಕ 04 ಅಕ್ಟೋಬರ್ 2025ರಂದು ಸಂಜೆ 4-00 ಗಂಟೆಗೆ ಮೈಸೂರು ಕುವೆಂಪು ನಗರ ಚಿತ್ರಭಾನು ರಸ್ತೆ, ನಂ 476, ಸುರುಚಿ ರಂಗಮನೆಯಲ್ಲಿ ಮಾಡುತ್ತಿದ್ದೇವೆ. ಮೈಸೂರಿನ ಪ್ರಪ್ರಥಮ ಮಹಿಳಾ ಜಾದೂಗಾರ್ತಿ ಹಾಗೂ ಮಾತನಾಡುವ ಗೊಂಬೆ ಕಲಾವಿದೆ ಶ್ರೀಮತಿ ಸುಮಾ ರಾಜಕುಮಾರ್ ಇವರು ಈ ವಾರದ ವಿಶೇಷ ಸಂಚಿಕೆಯ ಕಥೆಗಾರರು.
ತಾವು ಮಕ್ಕಳನ್ನು ಕರೆದುಕೊಂಡು ಬಂದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಪ್ರೋತ್ಸಾಹಿಸಬೇಕೆಂದು ಕೋರುತ್ತೇವೆ. https://wwwyoutube.com/kalasuruchimysore ಇದು ಕಲಾಸುರುಚಿಯ ಯುಟ್ಯೂಬ್ ಚಾನೆಲ್ ನ ಲಿಂಕ್. ನೀವೂ ನೋಡಿ – ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ದಯವಿಟ್ಟು ಚಾನೆಲ್ ನ್ನು ಸಬ್ಸ್ ಕ್ರೈಬ್ ಮಾಡಿ. ಹೆಚ್ಚಿನ ಮಾಹಿತಿಗಾಗಿ 9243581097 ಮತ್ತು 9945943115 ಸಂಖ್ಯೆಯನ್ನು ಸಂಪರ್ಕಿಸಿರಿ. ಕಥೆ ಕೇಳೋಣ ಬನ್ನಿ ಕಾರ್ಯಕ್ರಮದ ಕೊನೆಯಲ್ಲಿ ಪದಕೋಶ ಕಾರ್ಯಕ್ರಮವಿರುತ್ತದೆ.