ಬೆಂಗಳೂರು : ಕರ್ನಾಟಕ ಸುಗಮ ಸಂಗೀತ ಪರಿಷತ್ತು (ರಿ.) ಬೆಂಗಳೂರು ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅರ್ಪಿಸುವ ‘ಕವಿಯ ನೋಡಿ ಕವಿತೆ ಕೇಳಿ’ ಕಾರ್ಯಕ್ರಮವನ್ನು ದಿನಾಂಕ 12 ಅಕ್ಟೋಬರ್ 2025ರಂದು ಬೆಳಿಗ್ಗೆ 10-30 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಖ್ಯಾತ ಸಾಹಿತ್ಯ ಡಾ. ನಾ. ದಾಮೋದರ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ಖ್ಯಾತ ಸಾಹಿತಿ ಡಾ. ನಾಗತಿಹಳ್ಳಿ ಚಂದ್ರಶೇಖರ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ನಗರ ಶ್ರೀನಿವಾಸ ಉಡುಪಿ, ಡಾ. ಕಿಕ್ಕೇರಿ ಕೃಷ್ಣಮೂರ್ತಿ, ಪ್ರವೀಣ್ ಬಿ.ವಿ., ಪ್ರದೀಪ್ ಬಿ.ವಿ., ಅಮಿತ್ ಶೇಕರ್, ಕೆ.ಎಸ್. ಸುರೇಖಾ, ನಾಗಚಂದ್ರಿಕಾ ಭಟ್, ಸುನೀತಾ ಮುರಳಿ, ಮಂಗಳ ರವಿ, ಸುರೇಖಾ ಹೆಗಡೆ, ಅಪರ್ಣ ನರೇಂದ್ರ ಇವರುಗಳು ಗಾಯನದಲ್ಲಿ ಭಾಗವಹಿಸಲಿದ್ದು, ನಂತರ ಪ್ರಸ್ತುತಗೊಳ್ಳಲಿರುವ ‘ಗೀತ ಸಂಭ್ರಮ’ಕ್ಕೆ ಅಭಿಷೇಕ್ ಕೀಬೋರ್ಡ್, ರಮೇಶ್ ಕುಮಾರ್ ಕೊಳಲು, ಅಮಿತ್ ರಾಜ್ ತಬಲಾ ಮತ್ತು ಅನಂತಪದ್ಮನಾಭ ರಿದಂಪ್ಯಾಡ್ ನಲ್ಲಿ ಸಹಕರಿಸಲಿದ್ದಾರೆ.