Subscribe to Updates

    Get the latest creative news from FooBar about art, design and business.

    What's Hot

    ಹಿರಿಯ ಸಾಹಿತಿ ಪ್ರೊ. ಬಿ.ಎ. ವಿವೇಕ ರೈ ಇವರು ‘ಕಾರಂತ ಪ್ರಶಸ್ತಿ’ಗೆ ಆಯ್ಕೆ

    October 8, 2025

    ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಅಮೃತ ಭಕ್ತಿ ಸುಧಾ’ ಸಂಗೀತ ಕಾರ್ಯಕ್ರಮ | ಅಕ್ಟೋಬರ್ 12

    October 8, 2025

    ಸಾಗರದ ಕಾಗೋಡು ತಿಮ್ಮಕ್ಕ ರಂಗಮಂದಿರದಲ್ಲಿ ‘ಪ್ರಾಣ ಪದ್ಮಿನಿ’ ನಾಟಕ ಪ್ರದರ್ಶನ | ಅಕ್ಟೋಬರ್ 10 ಮತ್ತು 11

    October 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ 35ನೇ ಸಂಸ್ಥಾಪನಾ ವರ್ಷಾಚರಣೆ
    Literature

    ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ 35ನೇ ಸಂಸ್ಥಾಪನಾ ವರ್ಷಾಚರಣೆ

    October 8, 2025No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕನ್ನಡ ಗ್ರಾಮ ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ ಕಾಸರಗೋಡಿನಲ್ಲಿ ನಿರಂತರವಾಗಿ ಕನ್ನಡ ಭಾಷೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಕಾಸರಗೋಡು ಕನ್ನಡ ಗ್ರಾಮದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಎರಡು ಅಂತಸ್ತಿನ ‘ಕೇರಳ-ಕರ್ನಾಟಕ ಭವನ’ ಸಾಂಸ್ಕೃತಿಕ ಸಮುಚ್ಚಯದ ನಿರ್ಮಾಣ ಯೋಜನೆಯನ್ನು ಕೈಗೊಳ್ಳಲಾಗಿದೆ. ಕಾಸರಗೋಡು ಕನ್ನಡ ಗ್ರಾಮದಲ್ಲಿ 300 ಆಸನವುಳ್ಳ ಸಾಂಸ್ಕೃತಿಕ ಭವನ ನಿರ್ಮಾಣವಾಗಲಿದೆ. ಹೋಂ ಸ್ಟೇ ಮಾದರಿಯ 4 ಅತಿಥಿಗೃಹ, ಪ್ರಾದೇಶಿಕ ಜಾನಪದ ವಸ್ತು ಸಂಗ್ರಹಾಲಯ, ಆರ್ಟ್ ಗ್ಯಾಲರಿ, ಸಾಂಸ್ಕೃತಿಕ, ಯಕ್ಷಗಾನ, ಸಾಹಿತ್ಯ ಕುಟೀರ ಹಾಗೂ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ, ಯಕ್ಷಗಾನ, ನಾಟಕ, ಶಿಕ್ಷಣ ಅಧ್ಯಯನ ಕೇಂದ್ರ ನಿರ್ಮಾಣದ ಕಾರ್ಯ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ.

    ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣವಾಗಲಿರುವ ‘ಕೇರಳ-ಕರ್ನಾಟಕ ಭವನ’ ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲಿ ಕಾಸರಗೋಡು ಸ್ವ-ಉದ್ಯೋಗ ತರಬೇತಿ ಕೇಂದ್ರ, ಕೇರಳ ರಾಜ್ಯ ಕನ್ನಡ ಮಾಧ್ಯಮ ಕಂಪ್ಯೂಟರ್ – ಡಿಜಿಟಲ್ ಕೇಂದ್ರ, ಉದ್ಯೋಗಸ್ಥ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಗೃಹಿಣಿಯರಿಗೆ ಹೊಲಿಗೆ-ವಸ್ತ್ರ ವಿನ್ಯಾಸ ತರಬೇತಿ ಕೇಂದ್ರ, ಗ್ರಾಮೀಣ ಕ್ಲಿನಿಕ್ – ಹಿರಿಯ ನಾಗರಿಕರಿಗಾಗಿ ವೈದ್ಯಕೀಯ ತಪಾಸಣಾ ಕೇಂದ್ರ, ಕೆ. ಪುರುಷೋತ್ತಮ ಮಾಸ್ತರ್ ಸ್ಮಾರಕ ಗ್ರಂಥಾಲಯ, ಕೆ. ಯಶೋಧ ಸ್ಮಾರಕ ಕಾಸರಗೋಡು ಗೋಶಾಲೆ, ಕೃಷಿ ಕುಟೀರ ಹಾಗೂ ಕನ್ನಡ ಗ್ರಾಮ ಸಂಸ್ಥಾಪಕ ಅಧ್ಯಕ್ಷರ ಕಾರ್ಯಾಲಯ ಪ್ರಾರಂಭಗೊಳ್ಳಲಿದೆ. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ದಿನಾಂಕ 04 ನವಂಬರ್ 2025ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ‘ಕೇರಳ – ಕರ್ನಾಟಕ ಭವನ’ ಸಾಂಸ್ಕೃತಿಕ ಸಮುಚ್ಚಯದ ಬೃಹತ್ ಯೋಜನೆಯ ಶಿಲಾನ್ಯಾಸ ನಡೆಯಲಿದೆ.

    ಕಾಸರಗೋಡು ಕನ್ನಡ ಗ್ರಾಮದಲ್ಲಿ ಕೇರಳ – ಕರ್ನಾಟಕ ಭವನ ಸಾಂಸ್ಕೃತಿಕ ಸಮುಚ್ಚಯದಲ್ಲಿರುವ ವಿವಿಧ ಕೊಠಡಿಗಳ ನಿರ್ಮಾಣಕ್ಕಾಗಿ, ಕಂಪ್ಯೂಟರ್, ಪೀಠೋಪಕರಣ ಇತ್ಯಾದಿಗಳ ಖರೀದಿಗಾಗಿ ಸಾರ್ವಜನಿಕ ಸಂಘ ಸಂಸ್ಥೆಗಳು ಹಾಗೂ ದಾನಿಗಳು ನೀಡುವ ದೇಣಿಗೆಯನ್ನು ಸ್ವೀಕರಿಸಲಾಗುವುದು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಕೇರಳ – ಕರ್ನಾಟಕ ಭವನ ಸಾಂಸ್ಕೃತಿಕ ಸಮುಚ್ಚಯದ ಪ್ರಥಮ ಹಂತದ ಕಾರ್ಯ ಯೋಜನೆಗಳಿಗೆ ಸುಮಾರು 5 ಕೋಟಿ ರೂಪಾಯಿ ಅಂದಾಜು ವೆಚ್ಚ ಮಾಡಬೇಕಾಗುತ್ತದೆ. ಮಹಾ ದಾನಿಗಳು ಕೇರಳ – ಕರ್ನಾಟಕ ಭವನ ಸಮುಚ್ಚಯದಲ್ಲಿರುವ ವಿವಿಧ ಅತಿಥಿ ಗೃಹಗಳ ಕೊಠಡಿಗಳ ನಿರ್ಮಾಣಕ್ಕೆ ಈ ರೀತಿ ಸಹಕರಿಸಬಹುದು.
    1) ರೂಪಾಯಿ ಒಂದು ಕೋಟಿಮೊತ್ತದ ಧನ ಸಹಾಯ ನೀಡಿದವರ ಹೆಸರನ್ನು ಕೇರಳ – ಕರ್ನಾಟಕ ಭವನಕ್ಕೆ ಇರಿಸಲಾಗುವುದು.
    2) ರೂಪಾಯಿ 50 ಲಕ್ಷ ಮತ್ತು ಅದಕ್ಕಿಂತ ಹೆಚ್ಚು ದೇಣಿಗೆ ನೀಡುವ ದಾನಿಗಳ ಹೆಸರು, ಭಾವಚಿತ್ರ, ಪರಿಚಯವನ್ನು ವಿವಿಧ ಕೇಂದ್ರದ ಕೊಠಡಿಗೆ ಇರಿಸಿ ಅಲ್ಲಿ ದಾನಿಗಳ ಕೊಡುಗೆಯನ್ನು ದಾಖಲಿಸಲಾಗುವುದು ಮತ್ತು ದಾನಿಗಳಿಂದಲೇ ಕೊಠಡಿಯನ್ನು ಕೇರಳ – ಕರ್ನಾಟಕ ಭವನದಲ್ಲಿ ಉದ್ಘಾಟಿಸಲಾಗುವುದು.
    3) ರೂಪಾಯಿ 25 ಲಕ್ಷ ಮತ್ತು ಅದಕ್ಕಿಂತ ಹೆಚ್ಚು ದೇಣಿಗೆ ನೀಡುವ ದಾನಿಗಳ ಹೆಸರು, ಭಾವಚಿತ್ರವನ್ನು ವಿವಿಧ ಕೇಂದ್ರದ ಕೊಠಡಿಗೆ ಇರಿಸಿ ಅಲ್ಲಿ ದಾನಿಗಳ ಕೊಡುಗೆಯನ್ನು ದಾಖಲಿಸಲಾಗುವುದು ಮತ್ತು ದಾನಿಗಳಿಂದಲೇ ಕೊಠಡಿಯನ್ನು ಕೇರಳ – ಕರ್ನಾಟಕ ಭವನದಲ್ಲಿ ಉದ್ಘಾಟಿಸಲಾಗುವುದು.
    4) ರೂಪಾಯಿ 10 ಲಕ್ಷ ಹಾಗೂ ಅದಕ್ಕಿಂತ ಹೆಚ್ಚು ದೇಣಿಗೆ ನೀಡುವ ದಾನಿಗಳನ್ನು ಕೇರಳ-ಕರ್ನಾಟಕ ಭವನದ ‘ಮಹಾ ಪೋಷಕರು’ ಎಂದು ಗೌರವಿಸಲಾಗುವುದು. ಇಂಥವರ ಹೆಸರು ಭಾವಚಿತ್ರ ಪರಿಚಯವನ್ನು ಕೇರಳ – ಕರ್ನಾಟಕ ಭವನದಲ್ಲಿ ಇರಿಸಲಾಗುವುದು.
    5) ರೂಪಾಯಿ 5 ಲಕ್ಷ ಹಾಗೂ ಅದಕ್ಕಿಂತ ಹೆಚ್ಚು ದೇಣಿಗೆ ನೀಡುವ ದಾನಿಗಳನ್ನು ಕೇರಳ – ಕರ್ನಾಟಕ ಭವನದ ‘ಪೋಷಕರು’ ಎಂದು ಗೌರವಿಸಲಾಗುವುದು.
    6) ರೂಪಾಯಿ 1 ಲಕ್ಷ ಹಾಗೂ ಅದಕ್ಕಿಂತ ಹೆಚ್ಚು ದೇಣಿಗೆ ನೀಡುವ ದಾನಿಗಳನ್ನು ಕೇರಳ – ಕರ್ನಾಟಕ ಭವನದ ‘ವಿಶ್ವ ಕನ್ನಡ ಅಭಿಮಾನಿಗಳು’ ಎಂದು ಗೌರವಿಸಲಾಗುವುದು ಹಾಗೂ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ವಾರ್ಷಿಕ ಸಂಚಿಕೆ ಮತ್ತು ‘ನಮ್ಮ ಕಾಸರಗೋಡು ಕನ್ನಡ ಗ್ರಾಮ’ ತ್ರೈಮಾಸಿಕ ಕನ್ನಡ ಪತ್ರಿಕೆಯಲ್ಲಿ ಕನ್ನಡ ಗ್ರಾಮದ ಸಮಗ್ರ ಕಾರ್ಯ ಯೋಜನೆಗಳ ಅನುಷ್ಠಾನಕ್ಕಾಗಿ ನೀಡುವ ದೇಣಿಗೆಯನ್ನು ದಾಖಲಿಸಿ ದಾನಿಗಳ ಹೆಸರು, ಭಾವಚಿತ್ರ ಪರಿಚಯದೊಂದಿಗೆ ಪ್ರಕಟಿಸಲಾಗುವುದು.

    ಸಂಪರ್ಕ ವಿಳಾಸ : ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಕೇರಳ – ಕರ್ನಾಟಕ ಭವನ, ಕನ್ನಡ ಗ್ರಾಮ, ಕನ್ನಡ ಗ್ರಾಮ ರಸ್ತೆ, ಕಾಸರಗೋಡು – 671121. ಮೊಬೈಲ್ :-9448572016, 9901951965. Email:-
    [email protected]
    ಸಾರ್ವಜನಿಕ ಸಂಘ ಸಂಸ್ಥೆಗಳು ಮತ್ತು ಮಹನಿಯರು ನೀಡುವ ದೇಣಿಗೆಯನ್ನು ಈ ಬ್ಯಾಂಕ್ ಖಾತೆಗೆ ಕಳುಹಿಸಿ ಪ್ರೋತ್ಸಾಹಿಸಬಹುದು.
    NAME OF THE ACCOUNT HOLDER : KARAVALI SAMSKRITHIKA PRATHISTANA KASARAGOD
    NAME OF THE BANK : CANARA BANK HAMPANAKATTA, MANGALURU -575001
    SB ACCOUNT NUMBER : 0612 101 103297
    IFSC CODE :-CNRB0000612
    COMMUNICATION ADDRESS : (SPEED POST & COURIER)
    SHIVARAMA KASARAGOD, PRESIDENT, KARAVALI SAMSKRITHIKA PRATHISTANA (R),KERALA – KARNATAKA BHAVAN, KANNADA GRAMA, KANNADA GRAMA ROAD, KASARAGOD – 671121
    MANGALURU ADDRESS
    SHIVARAMA KASARAGOD, SRI MAHAMAYYA, VAIDYANATH NAGAR 1st MAIN CROSS ROAD, MADOOR, PO KOTEKAR,
    ULLAL TALUK, MANGLURU – 575022. MOBILE : 9448572016, 9901951965
    Email : [email protected]
    SB ACCOUNT NUMBER :-0612111101888 IFSC CODE:CNRB0000612
    ಗೂಗಲ್ ಪೇಯಲ್ಲಿ ಹಣ ಕಳುಹಿಸಬಹುದು.
    SHIVARAMA KASARAGOD Google pay No – 9448572016 ಇವರಿಗೆ ಕಳುಹಿಸಬಹುದು.
    ಶಿವರಾಮ ಕಾಸರಗೋಡು, ಅಧ್ಯಕ್ಷರು, ಕನ್ನಡ ಗ್ರಾಮ, ಕೇರಳ – ಕರ್ನಾಟಕ ಭವನ, ಕಾಸರಗೋಡು -671121
    ಮೊಬೈಲ್ :-9448572016

    baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಡಾ. ಜಿ. ಶಂಕರರಿಗೆ ಯಕ್ಷಗಾನ ಕಲಾರಂಗದ ಅಭಿನಂದನೆ
    Next Article ವಿವೇಕಾನಂದ ಪದವಿಪೂರ್ವ ವಿದ್ಯಾಲಯದಲ್ಲಿ ‘ವಿವೇಕ ವಿಜಯ’ ವಿಶೇಷ ಉಪನ್ಯಾಸಗಳು | ಅಕ್ಟೋಬರ್ 11
    roovari

    Add Comment Cancel Reply


    Related Posts

    ಹಿರಿಯ ಸಾಹಿತಿ ಪ್ರೊ. ಬಿ.ಎ. ವಿವೇಕ ರೈ ಇವರು ‘ಕಾರಂತ ಪ್ರಶಸ್ತಿ’ಗೆ ಆಯ್ಕೆ

    October 8, 2025

    ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಅಮೃತ ಭಕ್ತಿ ಸುಧಾ’ ಸಂಗೀತ ಕಾರ್ಯಕ್ರಮ | ಅಕ್ಟೋಬರ್ 12

    October 8, 2025

    ಸಾಗರದ ಕಾಗೋಡು ತಿಮ್ಮಕ್ಕ ರಂಗಮಂದಿರದಲ್ಲಿ ‘ಪ್ರಾಣ ಪದ್ಮಿನಿ’ ನಾಟಕ ಪ್ರದರ್ಶನ | ಅಕ್ಟೋಬರ್ 10 ಮತ್ತು 11

    October 8, 2025

    ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ‘ನೃತ್ಯ ಭಾನು’ ಭರತನಾಟ್ಯ ಪ್ರದರ್ಶನ | ಅಕ್ಟೋಬರ್ 10

    October 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.