ಸಾಗರ : ಸಾಂಸ್ಕೃತಿಕ ಒಡನಾಡಕ್ಕೊಂದು ಸ್ಪಂದನ (ರಿ.) ಸಾಗರ ಇವರ ವತಿಯಿಂದ ‘ಪ್ರಾಣ ಪದ್ಮಿನಿ’ ನಾಟಕ ಪ್ರದರ್ಶನವನ್ನು ದಿನಾಂಕ 10 ಮತ್ತು 11 ಅಕ್ಟೋಬರ್ 2025ರಂದು ಸಂಜೆ 7-00 ಗಂಟೆಗೆ ಸಾಗರದ ಕಾಗೋಡು ತಿಮ್ಮಕ್ಕ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಲ್ಜಿಯಂ ದೇಶದ ಮಾರಿಸ್ ಮ್ಯಾಟರ್ ಲಿಂಕ್ ಎಂಬ ಕವಿ 1902ರಲ್ಲಿ ಬರೆದ ‘ಮೊನ್ನವನ್ನ’ ಎಂಬ ನಾಟಕವನ್ನು ಎಸ್.ಜಿ. ಶಾಸ್ತ್ರಿಯವರು ಕನ್ನಡಕ್ಕೆ ಅನುವಾದಿಸಿದ್ದರು. ವಿಜಯನಗರ ಮತ್ತು ಮೊಘಲರ ಸಂಘರ್ಷದ ಹಿನ್ನೆಲೆಯಲ್ಲಿ ಈ ನಾಟಕವನ್ನು ರೂಪಾಂತರಿಸಿ ನಿರ್ದೇಶಿಸಲಾಗಿದೆ. ಮಂಜುನಾಥ ಎಲ್. ಬಡಿಗೇರ ಇವರ ರೂಪಾಂತರ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಪ್ರಸ್ತುತಗೊಳ್ಳುವ ಈ ನಾಟಕಕ್ಕೆ ಸಂಗೀತವನ್ನು ಭಾರ್ಗವ ಹೆಗ್ಗೋಡು ಮತ್ತು ಅರುಣಕುಮಾರ್ ನೀಡಿದ್ದಾರೆ. ಗುರುಮೂರ್ತಿ ವರದಾಮೂಲ ಅವರ ರಂಗಸಜ್ಜಿಕೆ, ವಸ್ತ್ರ ವಿನ್ಯಾಸ, ಪ್ರಸಾದನ ಹಾಗೂ ಜೀವನಕುಮಾರ್ ಹೆಗ್ಗೋಡು ಬೆಳಕಿನ ವಿನ್ಯಾಸ ಮಾಡಿರುತ್ತಾರೆ. ಎಂ.ವಿ. ಪ್ರತಿಭಾ, ರಿಯಾಜ್ ಮತ್ತು ಶಿವಕುಮಾರ್ ಉಳವಿ ಇವರು ನಿರ್ವಹಣೆ ಮಾಡಿದ್ದು, ಹೆಚ್ಚಿನ ಮಾಹಿತಿಗಾಗಿ 99451 78792 ಮತ್ತು 99802 47048 ಸಂಖ್ಯೆಯನ್ನು ಸಂಪರ್ಕಿಸಿರಿ.