ಬೋಳೂರು : ಮಾತಾ ಅಮೃತಾನಂದಮಯಿಯವರ ಜನ್ಮದಿನೋತ್ಸವದ ವಿಶೇಷ ಸಂದರ್ಭದಲ್ಲಿ ದಿನಾಂಕ 11 ಅಕ್ಟೋಬರ್ 2025ನೇ ಶನಿವಾರ ಬೆಳಿಗ್ಗೆ 9-00 ಗಂಟೆಯಿಂದ ನಿರಂತರವಾಗಿ ಶ್ರೀ ಗುರು ಪಾದುಕಾ ಪೂಜೆ, ಸತ್ಸಂಗ, ಭಜನೆ, ಧ್ಯಾನ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ, ಶ್ರೀ ಚಕ್ರ ಪೂಜೆ ಮೊದಲಾದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿ ವಿಶೇಷವಾಗಿ ಜಗದ್ವಿಖ್ಯಾತರಾದ ಅಮ್ಮನವರ ಜೀವನ ಆಧಾರಿತ ಕಥೆಯನ್ನು ಅವಲಂಬಿಸಿ ಯಕ್ಷಗುರು ವರ್ಕಾಡಿ ರವಿ ಅಲೆವೂರಾಯ ವಿರಚಿತ ‘ಅಮೃತಮಯಿ ಮಹಾತ್ಮೆ’ ಎಂಬ ಯಕ್ಷಗಾನ ಬಯಲಾಟವೂ ಪ್ರಸ್ತುತಗೊಳ್ಳಲಿದೆ.