ಮೈಸೂರು : ಮೈಸೂರಿನ ಹಿಂದೂಸ್ತಾನಿ ಸಂಗೀತ ಕಲಾವಿದರ ಒಕ್ಕೂಟ ಆಯೋಜಿಸಿರುವ ‘ಅಹೋರಾತ್ರಿ ಸಂಗೀತ ಕಾರ್ಯಕ್ರಮ’ವನ್ನು ದಿನಾಂಕ 11 ಅಕ್ಟೋಬರ್ 2025ರಂದು ರಾತ್ರಿ 9-00 ಗಂಟೆಯಿಂದ ಮೈಸೂರು ಕೆ.ಎಸ್.ಆರ್.ಟಿ.ಸಿ. ಲೇಔಟ್ ಇಲ್ಲಿರುವ ಸ್ವರಧಾರಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ರಮೇಶ್ ಕೋಲ್ಕುಂಡ, ಶಾರದಾ ಕಟ್ಟಿಗೆ, ಶ್ರೀಮತಿ ದೇವಿ, ವೀರಭದ್ರಯ್ಯ ಹಿರೇಮಠ ಇವರುಗಳ ಹಾಡುಗಾರಿಕೆಗೆ ಚಂದನ್ ಕುಮಾರ್ ಕೊಳಲು, ಪೃಥ್ವಿ ಭಾಸ್ಕರ್ ಪಿಟೀಲು, ರಾಧೇಶ್ ಮೃದಂಗ, ಸಮೀರ ರಾವ್ ಬಾನ್ಸುರಿ ಮತ್ತು ಆದರ್ಶ ಶೆಣೈ ತಬಲಾ ಸಾಥ್ ನೀಡಲಿದ್ದಾರೆ. ರಮೇಶ್ ಧನ್ಸೂರು ಮತ್ತು ದುಂಡಯ್ಯ, ಶುಭಾಂಗ್ ಹೆಬ್ಬಾರ್, ಭೀಮಾಶಂಕರ್ ಮತ್ತು ಪಂಚಮಿ ಇವರ ತಬಲಾ ಸೋಲೊ ಪ್ರಸ್ತುತಿಗೆ ಶ್ರೀ ರಾಮ್ ಭಟ್, ಹರಿಕೃಷ್ಣ, ರಮೇಶ್ ಕೋಲ್ಕುಂದ, ಅಭಯ ಸಾಯಿ ಇವರು ಹಾರ್ಮೋನಿಯಂ ಹಾಗೂ ರಮೇಶ್ ಧನ್ನೂರ್, ದುಂಡಯ್ಯ, ಭೀಮಾಶಂಕರ್ ಬಿದನೂರು ಇವರು ತಬಲಾದಲ್ಲಿ ಸಹಕರಿಸಲಿದ್ದಾರೆ.