ಮೈಸೂರು : ರಂಗಾಯಣ ಮೈಸೂರು ಇದರ ಹಿರಿಯ ಕಲಾವಿದರು ಅಭಿನಯಿಸುವ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ ಸಂಕಲನದಿಂದ ಆಯ್ದ ಕತೆಯನ್ನಾಧರಿಸಿದ ‘ಒಮ್ಮೆ ಹೆಣ್ಣಾಗು’ ನಾಟಕ ಪ್ರದರ್ಶನವನ್ನು ದಿನಾಂಕ 12 ಅಕ್ಟೋಬರ್ 2025ರಂದು ಸಂಜೆ 6-30 ಗಂಟೆಗೆ ಮೈಸೂರು ರಂಗಾಯಣದ ಭೂಮಿಗೀತ ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ. ಸವಿತಾ ರಾಣಿ ಇವರ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಶಶಿಕಲಾ ಬಿ.ಎನ್. ಮತ್ತು ನಂದಿನಿ ಕೆ. ಆರ್. ಇವರು ರಂಗದ ಮೇಲೆ ಕಾಣಿಸಿಕೊಳ್ಳಲಿದ್ದು, ಮಹೇಶ್ ಕಲ್ಲತ್ತಿ ಇವರು ಬೆಳಕಿನ ವಿನ್ಯಾಸ ಹಾಗೂ ಶ್ವೇತಾರಾಣಿ ಹೆಚ್.ಕೆ. ಇವರು ಸಹ ವಿನ್ಯಾಸ ಮತ್ತು ಸಹ ನಿರ್ದೇಶನ ಮಾಡಿರುತ್ತಾರೆ.