ಧಾರವಾಡ : ಕಲಾ ಸಂವಹನ ಟ್ರಸ್ಟ್ ನೀಡುವ ಸಿತಾರ್ ಮಾಂತ್ರಿಕ ಉಸ್ತಾದ್ ಹಮೀದ್ ಖಾನ್ ‘ಸಂಗೀತ ಸಾಧಕ ಪ್ರಶಸ್ತಿ’ಗೆ ಗಾಯಕಿ ಎಂ.ಡಿ. ಪಲ್ಲವಿ ಹಾಗೂ ಸಿತಾರ್ ಮಾಂತ್ರಿಕ ಉಸ್ತಾದ್ ಹಮೀದ್ ಖಾನ್ ‘ವಾದ್ಯ ನಿರ್ಮಾತೃ ಪ್ರಶಸ್ತಿ’ಗೆ ಸಿತಾರ್ ವಾದ್ಯ ತಯಾರಕ ಮೆಹಬೂಬಸಾಬ್ ಆಯ್ಕೆಯಾಗಿದ್ದಾರೆ.
ಎರಡೂ ಪುರಸ್ಕಾರಗಳು ತಲಾ ರೂ.25,000/- ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿವೆ. ಉಸ್ತಾದ್ ಹಮೀದ್ ಖಾನ್ ಇವರ ಐದನೇ ಸ್ಮರಣೆ ಪ್ರಯುಕ್ತ ಧಾರವಾಡದ ಸೃಜನಾ ರಂಗಮಂದಿರದಲ್ಲಿ ದಿನಾಂಕ 12 ಅಕ್ಟೋಬರ್ 2025ರಂದು ನಡೆಯುವ ಸಂಗೀತೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.