ಬೆಂಗಳೂರು : ಪಾಲನೇತ್ರ ಅಭಿನಂದನಾ ಸಮಿತಿ ಬೆಂಗಳೂರು ಇವರ ವತಿಯಿಂದ ಕನ್ನಡಪರ ಚಿಂತಕ, ಹೋರಾಟಗಾರ, ಸಾಮಾಜಿಕ, ಸಾಂಸ್ಕೃತಿಕ ಸಂಘಟಕ ಪಾಲನೇತ್ರ ಇವರಿಗೆ ‘ಅಭಿನಂದನೆ’ ಮತ್ತು ‘ಕನ್ನಡ ಜಂಗಮ’ ಗ್ರಂಥ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 15 ಅಕ್ಟೋಬರ್ 2025ರಂದು ಸಂಜೆ 4-00 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ಪೂಜ್ಯಶ್ರೀ ಸಿದ್ಧಲಿಂಗ ಸ್ವಾಮಿಗಳು ವಹಿಸಲಿದ್ದು, ಮಾನ್ಯ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಇವರು ಗ್ರಂಥ ಲೋಕಾರ್ಪಣೆ ಮಾಡಲಿರುವರು. ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಇವರು ಅಭಿನಂದನಾ ನುಡಿಗಳನ್ನಾಡಲಿದ್ದು, ಕನ್ನಡಪರ ಚಿಂತಕ, ಹೋರಾಟಗಾರರಾದ ಪಾಲನೇತ್ರ ಇವರನ್ನು ಅಭಿನಂದಿಸಲಾಗುವುದು. ಇದೇ ಸಂದರ್ಭದಲ್ಲಿ ಕನ್ನಡ ಹೋರಾಟಗಾರರಿಗೆ ಗೌರವಾರ್ಪಣೆ ಮತ್ತು ‘ಬಾರಿಸು ಕನ್ನಡ ಡಿಂಡಿಮವ’ ಖ್ಯಾತ ಗಾಯಕರಿಂದ ಗಾನಗೌರವ ಪ್ರಸ್ತುತಗೊಳ್ಳಲಿದೆ.