ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ದಿನಾಂಕ 10 ಅಕ್ಟೋಬರ್ 2025ರಂದು ಪರ್ಲಡ್ಕದ ಬಾಲವನ ಬಯಲು ರಂಗಮಂದಿರದಲ್ಲಿ ಕಾರಂತರ 124ನೇ ಜನ್ಮದಿನೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದ ಬಾಬ್ತು ‘ಶ್ರೀರಾಮ ನಿರ್ಯಾಣ’ ಪ್ರಸಂಗದ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ತೆಂಕಬೈಲು ಮುರಳಿಕೃಷ್ಣ ಶಾಸ್ತ್ರೀ, ಆನಂದ ಸವಣೂರು, ಪದ್ಯಾಣ ಜಯರಾಮ ಭಟ್, ಮುರಳಿಧರ ಕಲ್ಲೂರಾಯ, ತಾರನಾಥ ಸವಣೂರು ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ (ಶ್ರೀ ರಾಮ), ಕಿಶೋರಿ ದುಗ್ಗಪ್ಪ ನಡುಗಲ್ಲು (ಲಕ್ಷ್ಮಣ), ಶುಭಾ ಗಣೇಶ್ (ಕಾಲಪುರುಷ), ಹರಿಣಾಕ್ಷಿ ಜೆ. ಶೆಟ್ಟಿ (ದೂರ್ವಾಸ) ಸಹಕರಿಸಿದರು. ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ರಮೇಶ್ ಉಳಯ ವಂದಿಸಿದರು. ನೀನಾಸಂ ಹೆಗ್ಗೋಡು ಇದರ ನಿವೃತ್ತ ಪ್ರಾಧ್ಯಾಪಕರಾದ ಬಿ.ಆರ್. ವೆಂಕಟರಮಣ ಐತಾಳ್ ಕಲಾವಿದರನ್ನು ಗೌರವಿಸಿ, ಜಗನ್ನಾಥ ಅರಿಯಡ್ಕ ಸಹಕರಿಸಿದರು.