ಮಂಗಳೂರು : ಮಧುರತರಂಗ (ರಿ.) ಮಂಗಳೂರು ದಕ್ಷಿಣ ಕನ್ನಡ ಇವರ ವತಿಯಿಂದ ವಜ್ರ ಮಹೋತ್ಸವದ ಅಂಗವಾಗಿ ‘ಶ್ರೀ ಸಿದ್ಧಿವೃದ್ಧಿ ಸ್ವರಮಾಧುರ್ಯ’ ಸಂಗೀತ ಗಾಯನ ಸ್ಪರ್ಧೆಯನ್ನು ದಿನಾಂಕ 22 ನವೆಂಬರ್ 2025ರಂದು ಬೆಳಿಗ್ಗೆ 9-00 ಗಂಟೆಗೆ ಪಾಂಡೇಶ್ವರದಲ್ಲಿರುವ ಶ್ರೀ ಮುನೀಶ್ವರ ಮಹಾಗಣಪತಿ ದೇವಸ್ಥಾನದ ಸಭಾಗೃಹದಲ್ಲಿ ಆಯೋಜಿಸಲಾಗಿದೆ. ಷಷ್ಠಿ ಪೂರ್ತಿ 60 ತುಂಬಿದ ಹಿರಿಯ ಸಂಗೀತ ಆಸಕ್ತಿಯುಳ್ಳ ಕಲಾಪ್ರೇಮಿಗಳು ಸಂಗೀತ ಶಿಕ್ಷಕ, ಗಾಯಕ ಸಂಗೀತ ನಿರ್ದೇಶಕ ಆಚಾರ್ಯ ಜಗದೀಶ್ ಶಿವಪುರರವರು ರಚಿಸಿರುವ 150 ಗೀತೆಗಳಲ್ಲಿ ವಿಭಿನ್ನ 10 ಗೀತೆಗಳಲ್ಲಿ ತಮಗೆ ಇಷ್ಟವಾದ 2 ಗೀತೆಗಳನ್ನು ಆಯ್ಕೆ ಮಾಡಿ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ವಿಜೇತರಿಗೆ ನಗದು ಬಹುಮಾನದೊಂದಿಗೆ ಪ್ರಮಾಣಪತ್ರ ಹಾಗೂ ಫಲಕ ನೀಡಲಾಗುವುದು.
ಉಡುಪಿಯ ಉದ್ಯಮಿ ಕೆ.ಬಿ. ಜಗದೀಶ್ ಇವರ ಗೌರವ ಅಧ್ಯಕ್ಷತೆಯಲ್ಲಿ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿ ಶ್ರೀಮತಿ ಸುಗುಣ ಕಾಮತ್ ಇವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಸಂಜೆ 4-30 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಪಿ. ಹರಿದಾಸ್ ಆಚಾರ್ಯ ಇವರು ವಹಿಸಲಿದ್ದು, ಕಲಾಪ್ರೇಮಿ ಶ್ರೀಮತಿ ಶೋಭಾ ದೇವಾಡಿಗ ಇವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಹಿರಿಯ ಕಲಾ ಸಾಹಿತಿ ಜನಾರ್ದನ ಹಂದೆ ಕೋಟ ಇವರು ಚಂಪುಕಾವ್ಯ ಪ್ರಸ್ತುತಿ ಮಾಡಲಿದ್ದು, ಮ. ವೆಂಕಟೇಶ್ ಆಚಾರ್ಯ ಮತ್ತು ಸುಜೀರ್ ವಿನೊದ್ ಇವರಿಗೆ ಗೌರವ ಸನ್ಮಾನ ಮತ್ತು ತಬಲಾ ವಾದಕ ದೀಪಕ್ ರಾಜ್ ಇವರಿಗೆ ಬಿರುದು ಸನ್ಮಾನ ನಡೆಯಲಿದೆ.
ಭಾಗವಹಿಸುವ ಸ್ಪರ್ಧಾಳುಗಳಿಗೆ ಸ್ಪರ್ಧೆಯ ನಿಬಂಧನೆಗಳು :
1. ಸ್ಪರ್ಧಾಳುಗಳು ಭಾಗವಹಿಸಲು ಬರುವಾಗ ಆಧಾರ್‌ಕಾರ್ಡ್ ಪ್ರತಿಯನ್ನು ತರುವುದು.
2. ಭಾಗವಹಿಸುವ ಸ್ಪರ್ಧಾಳುಗಳು ‘ಶ್ರೀ ಸಿದ್ದಿ ವೃದ್ಧಿ ಸ್ವರಮಾಧುರ್ಯ’ ಕಾರ್ಯಕ್ರಮದ ಮೊದಲ ಸುತ್ತಿನಲ್ಲಿ ಒಂದು ಪಲ್ಲವಿ, ಒಂದು ಚರಣ ಹಾಡಲು ಅವಕಾಶವಿರುವುದು.
3. ಮೊದಲ ಸುತ್ತಿನಲ್ಲಿ ಆಯ್ಕೆಯಾಗಿರುವ ಸ್ಪರ್ಧಾಳುಗಳು, ಎರಡನೇ ಸುತ್ತಿನಲ್ಲಿ ಮತ್ತೋಂದು ಪೂರ್ತಿ ಹಾಡನ್ನು ಕಲಿತು ಹಾಡುವುದು.
4. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ನಗದು ಬಹುಮಾನ, ಪ್ರಶಂಸನಾ ಪತ್ರ ಹಾಗೂ ಫಲಕಗಳನ್ನು ನೀಡಲಾಗುವುದು.
5. ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರತಿಯೊಬ್ಬರಿಗೆ ಪ್ರಶಂಸನಾ ಪತ್ರ ಹಾಗೂ ಫಲಕವನ್ನು ನೀಡಲಾಗುವುದು.
6. ಸಮಯಕ್ಕೆ ಸರಿಯಾಗಿ ಸ್ಪರ್ಧಾಳುಗಳು 9-00 ಗಂಟೆಗೆ ಹಾಜರಾಗಿರತಕ್ಕದ್ದು ಮೊದಲ ಸುತ್ತು 10-00 ಗಂಟೆಯಿಂದ 12-30ರ ವರೆಗೆ ಎರಡನೇ ಸುತ್ತು 2-00 ಗಂಟೆಯಿಂದ 4-30ರವರೆಗೆ.
7. 4-30ರಿಂದ 7-30ರ ತನಕ ಸಮರೋಪ ಸಮಾರಂಭ ಜರಗುವುದು ಹಾಗೂ ವಿಜೇತರಿಗೆ ಬಹುಮಾನ ನೀಡಲಾಗುವುದು.
8. 60 ವರುಷ ಮೇಲ್ಪಟ್ಟ ಕಲಾ ಪ್ರೇಮಿಗಳಿಗೆ ಭಾಗವಹಿಸಲು ಮಾತ್ರ ಮುಕ್ತ ಅವಕಾಶವಿರುವುದು.
9. ಸ್ಪರ್ಧೆಯಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
10. ಭಾಗವಹಿಸುವ ಸ್ಪರ್ಧಾಳುಗಳು ಎರಡು ಗೀತೆಯನ್ನ ಆಯ್ಕೆ ಮಾಡಿ ಯಾವುದೇ ರೀತಿಯ ಸಂಗೀತ ವಾದ್ಯ ಪರಿಕರಗಳನ್ನು ಅಳವಡಿಸಲು ಅವಕಾಶವಿರುವುದಿಲ್ಲ.
11. ಸ್ಪರ್ಧೆಯಲ್ಲಿ ಹಾಡುವಂತ ಹತ್ತು ಗೀತೆಗಳನ್ನು + ಒಂದು ಬೋನಸ್ ಗೀತೆಯಾಗಿ ನೀಡಲಾಗಿರುತ್ತದೆ. ಅದರಲ್ಲಿ ನಿಮಗಿಷ್ಟವಾದ ಎರಡು ಗೀತೆಗಳನ್ನು ಆಯ್ಕೆ ಮಾಡಿ ಹಾಡಲು ಮಾತ್ರ ಮುಕ್ತ ಅವಕಾಶವಿದೆ. ಬೇರೆ ಹಾಡು ಹಾಡಲು ಅವಕಾಶವಿರುವುದಿಲ್ಲ.
12. ಯೂಟೂಬ್‌ನಲ್ಲಿ ಸ್ವರ ಕಂಠೀರವ ಚಾನಲ್ ಅಥವಾ ಜಗದೀಶ್ ಶಿವಪುರ ಅಂತ ಟೈಪ್ ಮಾಡಿದಾಗ ಸಿಗುತ್ತದೆ.
13. ಸ್ಪರ್ಧೆಯಲ್ಲಿ ಭಾಗವಹಿಸುವವರು ಆದಷ್ಟು ಬೇಗನೆ ಹೆಸರನ್ನು ನೋಂದಾಯಿಸಕೊಳ್ಳಬಹುದು.