ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಮಂಗಳಗಂಗೋತ್ರಿ ಇದರ ವತಿಯಿಂದ ಶ್ರೀಸಾಮಾನ್ಯರಿಗೆ ಪ್ರಾಚೀನ ಕನ್ನಡ ಸಾಹಿತ್ಯ ಸರಣಿ ಉಪನ್ಯಾಸ ಮಾಲಿಕೆಯ ಮೊದಲ ಕಂತು ದಿನಾಂಕ 13, 14 ಮತ್ತು 15 ಅಕ್ಟೋಬರ್ 2025ರಂದು ಮಂಗಳೂರು ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಲಿದೆ.
ದಿನಾಂಕ 13 ಅಕ್ಟೋಬರ್ 2025ರಂದು ಸಂಜೆ 5-00 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮಂಗಳೂರು ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಇವರು ಉದ್ಘಾಟನೆ ಮಾಡಲಿದ್ದಾರೆ. ಪಂಪ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಬಿ.ಎ. ವಿವೇಕ ರೈ ಇವರು ‘ಪಂಪನ ಕಾವ್ಯಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಸಂಜೆ 6-30 ಗಂಟೆಗೆ ಕುಮಾರಿ ಶ್ರೀ ರಕ್ಷಾ ಎಸ್.ಎಚ್. ಪೂಜಾರಿ ಇವರಿಂದ ವೀಣಾ ವಾದನ ನಡೆಯಲಿದೆ. ಉಪನ್ಯಾಸದ ಬಳಿಕ ದಿನಾಂಕ 14 ಅಕ್ಟೋಬರ್ 2025ರಂದು ಶ್ರದ್ಧಾ ನಾಯರ್ಪಳ್ಳ ಮತ್ತು ಮೇಧಾ ನಾಯರ್ಪಳ್ಳ ಇವರಿಂದ ಗಮಕ ಪ್ರಸ್ತುತಿ ಹಾಗೂ ದಿನಾಂಕ 15 ಅಕ್ಟೋಬರ್ 2025ರಂದು ಶ್ರೀವರದಾ ಪಟ್ಟಾಜೆ, ಶ್ರೀವಾಣಿ ಕಾಕುಂಚೆ ಮತ್ತು ಮಹೀಂದ್ರ ಪಿ. ಶೆಟ್ಟಿ ಇವರಿಂದ ಭಾವಗೀತೆ ಪ್ರಸ್ತುತಗೊಳ್ಳಲಿದೆ.