ಬೆಂಗಳೂರು : ರಂಗದರ್ಶನ ಪ್ರದರ್ಶನ ಕಲಾಕೇಂದ್ರ ಬೆಂಗಳೂರು ಇದರ ವತಿಯಿಂದ ಒಡನಾಡಿ ಬಂಧು ಸಿಜಿಕೆ – 75 ಮಾಸದ ನೆನಪು ಸರಣಿ ಕಾರ್ಯಕ್ರಮ -05 ದಿನಾಂಕ 14 ಅಕ್ಟೋಬರ್ 2025ರಂದು ಸಂಜೆ ಗಂಟೆ 6-45ಕ್ಕೆ ಬೆಂಗಳೂರಿನ ಕಲಾಗ್ರಾಮ ಮಲ್ಲತ್ತಹಳ್ಳಿಯ ಸಮುಚ್ಚಯ ರಂಗಮಂದಿರದಲ್ಲಿ ನಡೆಯಲಿದೆ.
ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಕೆ.ವಿ. ನಾಗರಾಜಮೂರ್ತಿ ಮತ್ತು ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಸಭಾ ಕಾರ್ಯಕ್ರಮದ ಬಳಿಕ ಮೈಕೊ ಶಿವಶಂಕರ್ ಇವರ ನಿರ್ದೇಶನದಲ್ಲಿ ‘ದಾಳ’ ನಾಟಕ ಪ್ರದರ್ಶನಗೊಳ್ಳಲಿದೆ.