Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನಲ್ಲಿ ಲೀಲಾವತಿ ಬೈಪಾಡಿತ್ತಾಯ ಸಂಸ್ಮರಣೆ

    October 13, 2025

    ಉಡುಪಿಯ ನೂತನ ರವೀಂದ್ರಮಂಟಪದಲ್ಲಿ ಡಾ. ಕೋಟ ಶಿವರಾಮ ಕಾರಂತರ 123ನೇ ಜನ್ಮದಿನಾಚರಣೆ

    October 13, 2025

    ಪರ್ಲಡ್ಕದ ಬಾಲವನದಲ್ಲಿ ಕಾರಂತರ ಜನ್ಮದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ

    October 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಗೌರವ’ ಮತ್ತು ’ಸಾಹಿತ್ಯಶ್ರೀ’ ಪ್ರಶಸ್ತಿ ಪ್ರಕಟ
    Awards

    ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಗೌರವ’ ಮತ್ತು ’ಸಾಹಿತ್ಯಶ್ರೀ’ ಪ್ರಶಸ್ತಿ ಪ್ರಕಟ

    October 13, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕರ್ನಾಟಕ ಸಾಹಿತ್ಯ ಅಕಾಡೆಮಿಯ 2024ನೇ ಸಾಲಿನ ವರ್ಷದ ‘ಗೌರವ ಪ್ರಶಸ್ತಿ’ ಮತ್ತು ’ಸಾಹಿತ್ಯಶ್ರೀ’ ಪ್ರಶಸ್ತಿ ಪ್ರಕಟಿಸಿದ್ದು, ಐವರು ವರ್ಷದ ಗೌರವ ಪ್ರಶಸ್ತಿಗೆ ಮತ್ತು 10 ಮಂದಿ ವರ್ಷದ ಸಾಹಿತ್ಯಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

    ಪುರಸ್ಕೃತರ ಪಟ್ಟಿ ಪ್ರಕಟಿಸಿದ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌. ಮುಕುಂದರಾಜ್‌ ಇವರು, 2024ನೇ ಸಾಲಿನ ವರ್ಷದ ‘ಗೌರವ ಪ್ರಶಸ್ತಿ’ಗೆ ಡಾ. ಎಂ. ಬಸವಣ್ಣ (ಚಾಮರಾಜನಗರ), ಶೂದ್ರ ಶ್ರೀನಿವಾಸ್‌ (ಬೆಂಗಳೂರು), ಪ್ರತಿಭಾ ನಂದಕುಮಾರ್‌ (ಬೆಂಗಳೂರು), ಡಾ. ಡಿ.ಬಿ. ನಾಯಕ್‌ (ಕಲಬುರಗಿ) ಮತ್ತು ಡಾ. ವಿಶ್ವನಾಥ್‌ ಕಾರ್ನಾಡ್‌ (ಮುಂಬಯಿ) ಇವರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ ರೂ. ಐವತ್ತು ಸಾವಿರ ನಗದು, ಪ್ರಶಸ್ತಿ ಫಲಕ, ಫಲತಾಂಬೂಲ ಒಳಗೊಂಡಿದೆ.

    2024ನೇ ಸಾಲಿನ ‘ಸಾಹಿತ್ಯ ಪ್ರಶಸ್ತಿ’ಗೆ ಡಾ. ಬಿ.ಎಂ. ಪುಟ್ಟಯ್ಯ- ಚಿಕ್ಕಮಗಳೂರು, ಡಾ. ಕೆ.ವೈ. ನಾರಾಯಣಸ್ವಾಮಿ- ಬೆಂಗಳೂರು, ಪದ್ಮಾಲಯ ನಾಗರಾಜ್‌- ಕೋಲಾರ, ಡಾ. ಬಿ.ಯು. ಸುಮಾ- ತುಮಕೂರು, ಡಾ. ಮಮತಾ ಸಾಗರ- ಶಿವಮೊಗ್ಗ, ಡಾ. ಸಬಿತಾ ಬನ್ನಾಡಿ-ಉಡುಪಿ, ಅಬ್ದುಲ್‌ ಹೈ ತೋರಣಗಲ್‌ – ಬಳ್ಳಾರಿ, ಡಾ. ಗುರುಲಿಂಗಪ್ಪ ದಬಾಲೆ- ಅಕ್ಕಲಕೋಟೆ, ಡಾ. ಎಚ್‌.ಎಸ್‌. ಅನುಪಮಾ- ಉತ್ತರ ಕನ್ನಡ ಮತ್ತು ಡಾ. ಅರಮೇಶ್‌ ಯತಗಲ್‌ ರಾಯಚೂರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂ. ಇಪ್ಪತ್ತೈದು ಸಾವಿರ ನಗದು, ಪ್ರಶಸ್ತಿ ಫಲಕ, ಫಲತಾಂಬೂಲವನ್ನು ಒಳಗೊಂಡಿದೆ.

    2023ನೇ ಸಾಲಿನ ವರ್ಷದ ಅತ್ಯುತ್ತಮ ಕೃತಿ ಪ್ರಶಸ್ತಿಗೆ ಡಾ. ವಿ.ಎ. ಲಕ್ಷ್ಮಣ- ಕಾಯಿನ್‌ ಬೂತ್‌ (ಕಾವ್ಯ), ಡಾ. ಬಿ.ಎಂ. ಗುರುನಾಥ್‌- ನಕ್ಷತ್ರ ತಬ್ಬಿ ಮಲಗಿದ ಹೊತ್ತು (ನವ ಕವಿಗಳ ಪ್ರಥಮ ಸಂಕಲನ), ಗಂಗಪ್ಪ ತಳವಾರ್‌-ಧಾವತಿ (ಕಾದಂಬರಿ), ಮಾಧವಿ ಭಂಡಾರಿ ಕೆರೆಕೋಣ- ಗುಲಾಬಿ ಕಂಪಿನ ರಸ್ತೆ (ಸಣ್ಣಕತೆ), ಡಾ. ಸಾಸ್ವೇಹಳ್ಳಿ ಸತೀಶ್‌- ಏಸೂರು ಕೊಟ್ಟರೂ ಈಸೂರು ಕೊಡೆವು (ನಾಟಕ), ಸರಸ್ವತಿ ಭೋಸಲೆ- ಕಾಡತಾವ ನೆನಪ (ಲಲಿತ ಪ್ರಬಂಧ), ಡಾ. ಡಿ.ವಿ. ಗುರುಪ್ರಸಾದ್‌- ಮಾಯನ್ನರ ಮಾಯಾನಗರಿ ಮೆಕ್ಸಿಕೋದಲ್ಲೊಂದು ಸುತ್ತು (ಪ್ರವಾಸ ಸಾಹಿತ್ಯ), ಡಾ. ಸಿ. ಚಂದ್ರಪ್ಪ- ಅಶೋಕ ಸತ್ಯ- ಅಹಿಂಸೆಯ ಮಹಾಶಯ (ಜೀವನ ಚರಿತ್ರೆ/ ಆತ್ಮಕಥೆ), ರಂಗನಾಥ ಕಂಟನಕುಂಟೆ- ಓದಿನ ಒಕ್ಕಲು (ಸಾಹಿತ್ಯ ವಿಮರ್ಶೆ), ಮತ್ತೂರು ಸುಬ್ಬಣ್ಣ- ಮುತ್ತಳ್ಳಿಯ ಅಜ್ಜಿ ಕಥೆಗಳು (ಮಕ್ಕಳ ಸಾಹಿತ್ಯ), ಡಾ. ಎಚ್‌.ಎಸ್‌. ಮೋಹನ್‌- ಕಣ್ಣಿನಲ್ಲಿ ಕಂಡ ಮೃತ್ಯುಬಿಂಬ ಮತ್ತು ಇತರ ವೈದ್ಯಕೀಯ ಲೇಖನಗಳು (ವಿಜ್ಞಾನ ಸಾಹಿತ್ಯ ), ಡಾ. ಪ್ರಕಾಶ ಭಟ್‌- ಹಳ್ಳಿಗಳನ್ನು ಕಟ್ಟುವ ಕಷ್ಟಸುಖ (ಮಾನವಿಕ), ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ- ಕಾಡುಗೊಲ್ಲ ಬುಡಕಟ್ಟು (ಸಂಶೋಧನೆ), ಡಾ. ಜೆ.ಪಿ. ದೊಡ್ಡಮನಿ- ಡಾ. ಬಾಬಾ ಸಾಹೇಬ ಅಂಬೇಡ್ಕರ (ಅನುವಾದ 1), ದೇವು ಪತ್ತಾರ- ಈಶಾನ್ಯೆ ಒಡಲು (ಅಂಕಣ ಬರಹ/ವೈಚಾರಿಕ ಬರಹ), ಸತೀಶ್‌ ತಿಪಟೂರು- ಮಣ್ಣಿನ ಬಂಡಿಯಲ್ಲಿ ಫುಕುವೋಕಾ (ಸಂಕೀರ್ಣ), ಗೋವಿಂದರಾಜು ಎಂ. ಕಲ್ಲೂರು- ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು (ಲೇಖಕರ ಮೊದಲ ಸ್ವತಂತ್ರ ಕೃತಿ) ಕೃತಿಗಳು ಬಹುಮಾನಕ್ಕೆ ಆಯ್ಕೆಯಾಗಿವೆ. ಈ ಪ್ರಶಸ್ತಿ ತಲಾ ರೂ. ಇಪ್ಪತ್ತೈದು ಸಾವಿರ ನಗದು, ಪ್ರಶಸ್ತಿ ಫಲಕ, ಫಲತಾಂಬೂಲ ಒಳಗೊಂಡಿದೆ.

    2023ನೇ ಸಾಲಿನ ದತ್ತಿ ಸಾಹಿತ್ಯ ಬಹುಮಾನಕ್ಕೆ ಡಾ. ಲತಾ ಗುತ್ತಿ- ಚದುರಂಗ (ಕಾದಂಬರಿ- ಚದುರಂಗ ದತ್ತಿ ಬಹುಮಾನ), ಸುಮಾ ರಮೇಶ್‌- ಹಚ್ಚೆ ದಿನ್‌-ಬೆಚ್ಚಿನ ನಗೆಯೊಂದಿಗೆ (ಲಲಿತ ಪ್ರಬಂಧ- ವಿ. ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ), ರೂಪ ಹಾಸನ- ಮಹಾಸಂಗ್ರಾಮಿ ಎಸ್‌.ಆರ್‌. ಹಿರೇಮಠ (ಜೀವನ ಚರಿತ್ರೆ- ಸಿಂಪಿ ಲಿಂಗಣ್ಣ ದತ್ತಿ), ಡಾ. ಕಾತ್ಯಾಯಿನಿ ಕುಂಜಿಬೆಟ್ಟು- ಇರವಿನ ಅರಿವು (ಸಾಹಿತ್ಯ ವಿಮರ್ಶೆ- ಪಿ.ಶ್ರೀನಿವಾಸರಾವ್‌ ದತ್ತಿ), ಟಿ.ಜಿ. ಪುಷ್ಪಲತಾ- ಕೇದಿಗೆ (ಕಾವ್ಯ ಹಸ್ತಪ್ರತಿ- ಚಿ.ಶ್ರೀನಿವಾಸರಾಜು ದತ್ತಿ), ಸುಗತ ಶ್ರೀನಿವಾಸರಾಜು- ಎಚ್‌.ಡಿ. ದೇವೇಗೌಡರ ಬದುಕು ಮತ್ತು ದುಡಿಮೆ ನೇಗಿಲ ಗೆರೆಗಳು (ಅನುವಾದ 1- ಎಲ್‌. ಗುಂಡಪ್ಪ ಮತ್ತು ಶಾರದಮ್ಮ ದತ್ತಿ), ಅಬ್ಬೂರು ಪ್ರಕಾಶ್‌- ಕಣ್ಣ ಕನ್ನಡಿಯಲ್ಲಿ (ಲೇಖಕರ ಮೊದಲ ಸ್ವತಂತ್ರ ಕೃತಿ- ಮಧುರಚೆನ್ನ ದತ್ತಿ), ಸುದೇಶ ದೊಡ್ಡಪಾಳ್ಯ- ಈಶಾನ್ಯದ ದಿಕ್ಕಿನಿಂದ (ವೈಚಾರಿಕ/ ಅಂಕಣ ಬರಹ- ಬಿ.ವಿ. ವೀರಭದ್ರಪ್ಪ ದತ್ತಿ), ಸುಕನ್ಯಾ ಕನಾರಹಳ್ಳಿ- ಲವ್‌ ಆ್ಯಂಡ್‌ ವಾಟರ್‌ ಪ್ಲೋ ಟುಗೆದರ್‌ (ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ- ಅಮೆರಿಕನ್ನಡ ದತ್ತಿನಿಧಿ) ಕೃತಿಗಳು ಆಯ್ಕೆಯಾಗಿವೆ.

    award baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ನುಡಿನಮನ ಮತ್ತು ವಿಚಾರ ಸಂಕಿರಣ | ಅಕ್ಟೋಬರ್ 16
    Next Article ಪರ್ಲಡ್ಕದ ಬಾಲವನದಲ್ಲಿ ಕಾರಂತರ ಜನ್ಮದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ
    roovari

    Add Comment Cancel Reply


    Related Posts

    ಮಂಗಳೂರಿನಲ್ಲಿ ಲೀಲಾವತಿ ಬೈಪಾಡಿತ್ತಾಯ ಸಂಸ್ಮರಣೆ

    October 13, 2025

    ಉಡುಪಿಯ ನೂತನ ರವೀಂದ್ರಮಂಟಪದಲ್ಲಿ ಡಾ. ಕೋಟ ಶಿವರಾಮ ಕಾರಂತರ 123ನೇ ಜನ್ಮದಿನಾಚರಣೆ

    October 13, 2025

    ಪರ್ಲಡ್ಕದ ಬಾಲವನದಲ್ಲಿ ಕಾರಂತರ ಜನ್ಮದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ

    October 13, 2025

    ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ನುಡಿನಮನ ಮತ್ತು ವಿಚಾರ ಸಂಕಿರಣ | ಅಕ್ಟೋಬರ್ 16

    October 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.