ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಮ್ಮೇಳನ ಸಮಿತಿ ಮಂಗಳೂರು ಇವರ ವತಿಯಿಂದ ಆಯೋಜಿಸುವ ‘ವರ್ಣಯಾನ’ ಒಂದು ದಿನದ ಸಮ್ಮೇಳನವು ದಿನಾಂಕ 09 ನವೆಂಬರ್ 2025ರಂದು ಬೆಳಗ್ಗೆ 9-30 ಗಂಟೆಗೆ ಮಂಗಳೂರಿನ ಕೊಡಿಯಾಲ್ ಬೈಲ್ ಸಂತ ಅಲೋಶಿಯಸ್ ಪ್ರೌಢಶಾಲೆಯಲ್ಲಿ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲಾ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, 1ರಿಂದ 4ನೇ ತರಗತಿಯವರಿಗೆ ‘ಪರಿಸರ’, 5ರಿಂದ 7ನೇ ತರಗತಿಯವರಿಗೆ ‘ಹಳ್ಳಿಯ ಜೀವನ’, 8ರಿಂದ 10ನೇ ತರಗತಿಯವರಿಗೆ ‘ನಮ್ಮ ಕರಾವಳಿ’ ಮತ್ತು ಪ್ರಥಮ ಹಾಗೂ ದ್ವಿತೀಯ ಪಿಯುಸಿಯವರಿಗೆ ‘ತುಳು ನಾಡಿನ ಸಂಸ್ಕೃತಿ ಮತ್ತು ಕಲಾ ವೈಭವ’ ಎಂಬ ವಿಷಯದಲ್ಲಿ ಯಾವುದೇ ಮಾಧ್ಯಮದಲ್ಲಿ ಚಿತ್ರ ರಚಿಸಬಹುದು. ಚಿತ್ರಕಲಾ ಸ್ಪರ್ಧೆಯ ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗಾಗಿ 94819 77542 ಮತ್ತು 99720 84156 ಸಂಖ್ಯೆಯನ್ನು ಸಂಪರ್ಕಿಸಿರಿ.